Advertisement
ಇಂದಿನ ಯುವಜನತೆ ಕಾರುಗಳಿಗಿಂತ ಜಾಸ್ತಿ ಬೈಕ್ ಗಳನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ, ರಾಯಲ್ ಲುಕ್, ವಿಶೇಷವಾದ ಸದ್ದಿನೊಂದಿಗೆ ಯುವಕರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ಮೊದಲ ನೋಟದಲ್ಲೇ ಈ ಬೈಕ್ ಗಳು ಗಮನಸೆಳೆಯುತ್ತದೆ. ನಿಮ್ಮಲ್ಲಿ ಐಷಾರಾಮಿ ಕಾರು ಇರಲಿ, ಬಸ್ ಇರಲಿ, ವಿಶೇಷ ಸದ್ದಿನೊಂದಿಗೆ ಕ್ರೂಸರ್ ಬೈಕ್‌ನಲ್ಲಿ ರಸ್ತೆಯಲ್ಲಿ ಹೋಗುವ ಮಜಾವೇ ಬೇರೆ. ಅದಕ್ಕೆಂದೇ ಈ ಬೈಕ್‌ಗಳು ಇಂದಿನ ಯುವಜನತೆಯ ಹಾಟ್ ಫೇವರೆಟ್. ಅದರಲ್ಲಿಯೂ, ಅಡ್ವೆಂಚರ್ ರೈಡ್‌ಗಳಿಗೆ ಹೇಳಿ ಮಾಡಿಸಿದಂತಿರುವ ಈ ಬೈಕ್ ಗಳನ್ನು ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.
Related Articles
ದಶಕಗಳ ಹಿಂದೆ ಭಾರತದ ರಸ್ತೆಗಳಲ್ಲಿ ಸದ್ದು ಮಾಡಿದ್ದ ಜಾವಾ ಬೈಕ್‌ಗಳು ಹೊಸ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಮತ್ತೂಮ್ಮೆ ಮಾರುಕಟ್ಟೆಗೆ ಬರಲಿವೆ. ಜಾವಾ ಮೋಟರ್ ಸೈಕಲ್ ಕಂಪೆನಿ ಜಾವಾ, ಜಾವಾ 42 ಮತ್ತು ಜಾವಾ ಪೆರಿಕ್ ಎಂಬ ಮೂರು ವೇರಿಯಂಟ್‌ಗಳು ಮಾರುಕ್ಟೆಯಲ್ಲಿವೆ. ಜಾವಾ 42 ಬೈಕ್ 293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದರೆ, ಜಾವಾ ಪೆರಿಕ್ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್ ಆಗಿದ್ದು, 27 ಬಿಎಚ್‌ಪಿ ಮತ್ತು 28 ಎನ್‌ಎಂ ಗರಿಷ್ಠ ಟಾರ್ಕ್ ಹೊಂದಿದೆ. ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು. ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
Advertisement
ದುಬಾರಿ ಬೈಕ್ ಹಾರ್ಲೆಡೇವಿಡ್ಸನ್ಕ್ರೂಸರ್ ಬೈಕ್‌ಗಳ ಪೈಕಿ ಹಾರ್ಲೆಡೇವಿಡ್ ಸನ್ ಬೈಕ್ ಕೂಡ ಒಂದು. 5.31 ಲಕ್ಷ ದಿಂದ ಪ್ರಾರಂಭವಾಗಿ ಸುಮಾರು 50 ಲಕ್ಷ ರೂ. ವರೆಗೆ ಈ ಬೈಕ್‌ಗೆ ದರವಿದೆ. ಹಾರ್ಲೆಡೇವಿಡ್ ಸನ್ ಸ್ಟ್ರೀಟ್ ಗ್ಲೆ çಡ್ ಸ್ಪೆಷಲ್ ಬೈಕ್‌ಗೆ ಸುಮಾರು 30 ಲಕ್ಷ, ರೋಡ್ ಕಿಂಗ್ ಬೈಕ್ ಗೆ 24.99 ಲಕ್ಷ ರೂ., ಐರನ್ 882 ಮಾಡೆಲ್ ಬೈಕ್‌ಗೆ 9.20 ಲಕ್ಷ, ಪ್ಯಾಟ್ ಬಾಬ್ 14.65 ಲಕ್ಷ ರೂ. ಹೊಂದಿದೆ. ಶಕ್ತಿಶಾಲಿ ಎಂಜಿನ್
ಬಜಾಜ್ ಆಟೋ ಸಂಸ್ಥೆಯು ಕೆಲವು ತಿಂಗಳುಗಳ ಹಿಂದೆ ಅವೇಂಜರ್ 220 ಸ್ಟ್ರೀಟ್ ಮತ್ತು
ಅವೆಂಜರ್ 180 ಸ್ಟ್ರೀಟ್ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಬಹುನಿರೀಕ್ಷಿತ ಬಜಾಜ್ ಆವೇಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್ ಬೈಕ್ ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, ಮಾರುಕಟ್ಟೆಯಲ್ಲಿ ಸುಮಾರು 83,475 ರೂ. ಬೆಲೆ ಹೊಂದಿದೆ. ಈ ಬೈಕ್ 176.6 ಸಿಸಿ ಡಿಟಿಎಸ್-ಐ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 15.3 ಬಿಎಚ್‌ಪಿ ಮತ್ತು 13.7 ಎನ್‌ಎಂ ಟಾಕ್ಸ್‌ನ್ನು ಉತ್ಪಾದಿಸುವ ಶಕ್ತಿ ಹೊಂದಿದೆ. ಆದೇ ರೀತಿ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಸುಜುಕಿ ಸಂಸ್ಥೆ ಕೂಡ ಕಳೆದ ಕೆಲವು ತಿಂಗಳುಗಳ ಹಿಂದೆ ಇನ್ಟ್ರುಡರ್ 150 ಎಫ್‌ಐ ಬೈಕ್ ಬಿಡುಗಡೆ ಮಾಡಿದ್ದು, 1.07 ಲಕ್ಷ ರೂ. ಬೆಲೆ ಹೊಂದಿದೆ. ನವೀನ್ ಭಟ್ ಇಳಂತಿಲ