Advertisement

ಶಾರುಖ್ ಗೆ ತಟ್ಟಿದ ಪುತ್ರನ ಡ್ರಗ್ಸ್ ನಂಟಿನ ಬಿಸಿ |ಬೈಜೂಸ್ ಜಾಹೀರಾತುಗಳಿಗೆ ತಾತ್ಕಾಲಿಕ ತಡೆ

03:25 PM Oct 10, 2021 | Team Udayavani |

ಮುಂಬೈ: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನದ ಬಿಸಿ ನಟ ಶಾರುಖ್ ಖಾನ್ ಅವರಿಗೆ ತಟ್ಟಿದೆ. ಇವರು ಕಾಣಿಸಿಕೊಂಡಿರುವ ತನ್ನ ಜಾಹೀರಾತುಗಳನ್ನು ಬೈಜೂಸ್ ತಾತ್ಕಾಲಿಕವಾಗಿ ನಿಲ್ಲಿಸಿದೆ.

Advertisement

ಅಕ್ಟೋಬರ್ 2 ರಂದು ಮುಂಬೈನ ಕರಾವಳಿ ಪ್ರದೇಶದಲ್ಲಿದ್ದ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡಗ್ರ ಪಾರ್ಟಿ ಮೇಲೆ ದಾಳಿ ನಡೆಸಿದ ಎನ್‍ಸಿಬಿ, ಶಾರುಖ್ ಪುತ್ರ ಸೇರಿ ಏಳು ಜನರನ್ನು ಬಂಧಿಸಿದದೆ. ಈ ಘಟನೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ವಿರುದ್ಧ ಟ್ರೋಲ್ ಗಳು ಶುರುವಾದವು. ಅದರಲ್ಲೂ ಅವರು ಅಂಬಾಸಿಡರ್ ಆಗಿರುವ ಬೈಜೂಸ್ ಕಂಪನಿಯನ್ನು ಎಳೆದು ತಂದು ಟ್ರೋಲ್ ಮಾಡಲಾಯಿತು. ಇದರಿಂದ ಎಚ್ಚೆತ್ತುಕೊಂಡಿರುವ ಬೈಜೂಸ್, ತನ್ನ ಜಾಹೀರಾತುಗಳಿಗೆ (ಶಾರುಖ್ ಖಾನ್ ಕಾಣಿಸಿಕೊಂಡಿರುವ) ತಾತ್ಕಾಲಿಕವಾಗಿ ತಡೆ ನೀಡಿದೆ. ಕೇವಲ ಜಾಹೀರಾತುಗಳಿಗೆ ಮಾತ್ರ ಬ್ರೇಕ್ ಹಾಕಲಾಗಿದೆ. ಆದರೆ, ಅಂಬಾಸಿಡರ್ ಸ್ಥಾನದಿಂದ ಶಾರುಖ್ ಅವರನ್ನು ಕೈ ಬಿಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಶಾರುಖ್ ಖಾನ್ ಅವರು 2017 ರಿಂದ ಬೈಜೂಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈವರೆಗೆ ಕಂಪನಿಗೆ ಸಂಬಂಧಪಟ್ಟಂತಹ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ, ಪುತ್ರನ ಬಂಧನದ ನಂತರ ಟ್ವಟರ್ ಸೇರಿದಂತೆ ಸಾಮಾಜಿಕ ಜಾಲತಾಗಳಲ್ಲಿ ಶಾರುಖ್ ಅವರನ್ನು ಬೈಜೂಸ್ ಜಾಹೀರಾತುಗಳನ್ನು ಬಳಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು.

ಇನ್ನು ಮುಂಬೈನ ಸ್ಥಳೀಯ ನ್ಯಾಯಾಲಯವು ಗುರುವಾರ ಆರ್ಯನ್ ಖಾನ್ ಮತ್ತು ಇತರ 7 ಮಂದಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಅಕ್ಟೋಬರ್ 3 ರಂದು ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next