Advertisement

ಸಿಆರ್‌ಪಿಎಫ್ ಯೋಧರಿಗೆ ಸಿಗಲಿದೆ ಸಂಸ್ಕಾರದ ಪಾಠ!

02:05 AM Dec 25, 2021 | Team Udayavani |

ಹೊಸದಿಲ್ಲಿ: ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ಯೋಧರು ಖಿನ್ನತೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವಂಥ ಘಟನೆ ಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಆರ್‌ಪಿಎಫ್, ಯೋಧರನ್ನು “ಸಂಸ್ಕಾರಿ’ಗಳನ್ನಾಗಿಸಿ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಪೂರಕವಾಗಿ “ಸಂಸ್ಕಾರ ಶಾಲೆ’ಗಳನ್ನು ಆರಂಭಿಸಲು ನಿರ್ಧರಿಸಿದೆ.

Advertisement

ಸಿಆರ್‌ಪಿಎಫ್ ಯೋಧರೊಬ್ಬರು ನೀಡಿರುವ ಸಲಹೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೀನಿಯರ್‌ ಮತ್ತು ಜೂನಿಯರ್‌ ಸಿಬಂದಿ ನಡುವೆ ಆಗಾಗ ಮನಸ್ತಾಪಗಳಾಗುತ್ತವೆ. ಪರಸ್ಪರ ಗೌರವದ ಕೊರತೆ, ವಾಗ್ವಾದಗಳು, ಜಗಳ, ಕೊಲೆ, ಆತ್ಮಹತ್ಯೆ ಪ್ರಕರಣಗಳು ಪಡೆಯ ವರ್ಚಸ್ಸಿಗೂ ಧಕ್ಕೆ ತರುತ್ತಿವೆ. ಹೀಗಾಗಿ ಸಿಬಂದಿ ನಡುವೆ ಗೌರವ ಬೆಳೆಸುವಂಥ ಕಾರ್ಯಕ್ರಮ ಕೈಗೊಂಡರೆ ಉತ್ತಮ ಎಂಬ ಸಲಹೆ ನೀಡಲಾಗಿತ್ತು.

ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಸಿಆರ್‌ಪಿಎಫ್ ಕ್ಷೇಮಾಭಿವೃದ್ಧಿ ವಿಭಾಗವು ಅರೆ ಸೇನಾ ಪಡೆಯ ಎಲ್ಲ ಘಟಕಗಳಿಗೂ “ಸಂಸ್ಕಾರ ಶಾಲೆ’ ಆರಂಭಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಈ ಶಾಲೆಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು

ಸುತ್ತೋಲೆಯಲ್ಲಿ ಏನಿದೆ?
ಯೋಗಾಭ್ಯಾಸವು ಹೇಗೆ ನಮ್ಮ ಶರೀರವನ್ನು ಫಿಟ್‌ ಆಗಿಸುತ್ತದೋ, ಅದೇ ಮಾದರಿಯಲ್ಲಿ ಸಂಸ್ಕಾರವು ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಹೀಗಾಗಿ ಎಲ್ಲ ಘಟಕಗಳು, ವಲಯಗಳು ಹಾಗೂ ಬೆಟಾ
ಲಿಯನ್‌ಗಳು “ಸಂಸ್ಕಾರ ಶಾಲೆ’ಯನ್ನು ಆರಂಭಿಸ ಬೇಕು. ಇಲ್ಲಿ ಹಿರಿಯರು ಮತ್ತು ಕಿರಿಯರು ಉತ್ತಮ ನೈತಿಕ ಮೌಲ್ಯಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಆಗಾಗ್ಗೆ ಅನೌಪಚಾರಿಕ ಗೆಟ್‌ ಟುಗೆದರ್‌ ನಡೆಸಬೇಕು. ಒಳ್ಳೆಯ ವಿಚಾರಗಳನ್ನು ವಿನಿಮಯ ಮಾಡಿ ಸಿಬಂದಿಯ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ‌.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next