Advertisement

ಸಿಆರ್‌ಪಿಎಫ್ ನಲ್ಲಿ 153 ಆತ್ಮಹತ್ಯೆ; ಸಾರ್ವಕಾಲಿಕ ಗರಿಷ್ಠ ಪ್ರಕರಣ

10:53 PM Feb 04, 2023 | Team Udayavani |

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ 53 ವರ್ಷದ ರಾಜ್‌ಬೀರ್ ಕುಮಾರ್ ಅವರು ಕರ್ತವ್ಯದ ವೇಳೆ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರ ನಿವಾಸದಲ್ಲಿ ಶುಕ್ರವಾರ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ವರದಿಗಳ ಪ್ರಕಾರ ಸಂಜೆ 4:15 ರ ಸುಮಾರಿಗೆ ಘಟನೆ ಸಂಭವಿಸಿದೆ. ಅವರ ಕೃತ್ಯದ ಹಿಂದಿನ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಮತ್ತು ಯಾವುದೇ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿಲ್ಲ.

ಪ್ರತಿಕ್ರಿಯೆ ನೀಡಿರುವ ಸಿಆರ್‌ಪಿಎಫ್ ಈ ಕೃತ್ಯದ ಹಿಂದಿನ ಕಾರಣವನ್ನು ಕಂಡುಹಿಡಿಯಲು ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಏತನ್ಮಧ್ಯೆ, ಮೃತ ಭದ್ರತಾ ಸಿಬಂದಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಆರ್‌ಪಿಎಫ್ ಸಿಬ್ಬಂದಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಮತ್ತು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಸಹ ಪ್ರಾರಂಭಿಸಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಅರೆಸೈನಿಕ ಪಡೆಗಳಲ್ಲಿ, 2017 ರಲ್ಲಿ 123, 2018 ರಲ್ಲಿ 96, ಮತ್ತು 2019 ರಲ್ಲಿ 129. ಈ ಸಂಖ್ಯೆ 2020 ರಲ್ಲಿ 137 ರಷ್ಟಿತ್ತು, 2021 ರಲ್ಲಿ ಸಿಆರ್‌ಪಿಎಫ್ ನಲ್ಲಿ 58 ಪ್ರಕರಣಗಳೊಂದಿಗೆ 153 ಆತ್ಮಹತ್ಯೆ ಪ್ರಕರಣಗಳಲ್ಲಿ ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ವರದಿ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next