ಬಿಹಾರ: ಇಲ್ಲಿನ ಗಯಾ ಜಿಲ್ಲೆಯ ಮತದಾನ ಕೇಂದ್ರವೊಂದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ವೃದ್ಧೆಯೊಬ್ಬರನ್ನು ಎತ್ತಿಕೊಂಡು ಮತಗಟ್ಟೆಯ ಕಡೆಗೆ ಹೋಗುತ್ತಿರುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಚುನಾವಣಾ ಆಯೋಗದ ಅಧಿಕೃತ ವಕ್ತಾರರಾಗಿರುವ ಶೆಫಾಲಿ ಶರಣ್ ಎನ್ನುವವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ತನ್ನ ಹಕ್ಕನ್ನು ಚಲಾಯಿಸಬೇಕೆಂದು ಆ ವೃದ್ಧೆಗೆ ಇರುವ ತುಡಿತ ಮತ್ತು ಭದ್ರತಾ ಕಾರ್ಯದ ನಡುವೆ ಅಶಕ್ತರಿಗೆ ಸಹಾಯ ಹಸ್ತ ನೀಡಬೇಕೆನ್ನುವ ಆ ಯೋಧನ ಮನಸ್ಥಿತಿ ನಮ್ಮ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಸಾಕ್ಷಿಯಾಗುವಂತಿದೆ ಮತ್ತು ಇನ್ನಷ್ಟು ಜನರಿಗೆ ಮತದಾನ ಮಾಡುವಲ್ಲಿ ಇಂತಹ ಘಟನೆಗಳು ಪ್ರೇರಣೆಯಾಗಲಿದೆ.