Advertisement

ಉಗ್ರ ವಿರೋಧಿ ಕಾರ್ಯಾಚರಣೆಗೆ ಬುಲೆಟ್‌ ಪ್ರೂಫ್ ಸಿಎಸ್‌ಆರ್‌ವಿ

12:15 AM Mar 04, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತ ಗತಿಯಲ್ಲಿ ಕೈಗೊಳ್ಳಲು ಸಿಆರ್‌ಪಿಎಫ್, ಬುಲೆಟ್‌ ಪ್ರೂಫ್ ರಕ್ಷಾಕವಚ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಹೈಟೆಕ್‌ ಕ್ರಿಟಿಕಲ್‌ ಸಿಚುಯೇಶನ್‌ ರೆಸ್ಪಾನ್ಸ್‌ ವೆಹಿ ಕಲ್ಸ್‌(ಸಿಎಸ್‌ಆರ್‌ವಿ) ಪರಿಚಯಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಕಾಶ್ಮೀರ ಸಿಆರ್‌ಪಿಎಫ್ ಐಜಿ(ಕಾರ್ಯಾಚರಣೆ) ಎಂ.ಎಸ್‌. ಭಾಟಿಯಾ, “ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಸಿಎಸ್‌ಆರ್‌ವಿ ಮತ್ತು ಬುಲೆಟ್‌ ಪ್ರೂಫ್ ಜೆಸಿಬಿ ಬಳಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಿರಿದಾದ ಸ್ಥಳಗಳಲ್ಲಿ ಉಗ್ರರು ಅಡಗಿದ್ದರೆ ಇವುಗಳನ್ನು ಪರಿಣಾಮ ಕಾರಿಯಾಗಿ ಬಳಸಬಹುದಾಗಿದೆ. ಇವುಗಳು ಬುಲೆಟ್‌ ಪ್ರೂಫ್ ರಕ್ಷಾಕವಚ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಕೆಮರಾಗಳನ್ನು ಹೊಂದಿವೆ,’ ಎಂದರು.

ಶ್ವಾನಗಳಲ್ಲ, ಸೈನಿಕ ಸಹಚರರು!: ಗುಲ್ಮಾರ್ಗ್‌ನ ಎತ್ತರದ ಪ್ರದೇಶಗಳ ಲ್ಲಿರುವ ಶ್ವಾನಗಳು ಸ್ಥಳೀಯರ ಪಾಲಿಗೆ ಬೀದಿ ನಾಯಿಗಳು. ಆದರೆ ಗಡಿಯಲ್ಲಿ ಗಸ್ತು ತಿರುಗುವ ಯೋಧರಿಗೆ ತಮ್ಮ ಜೀವ ಕಾಪಿಡುತ್ತಿರುವ ಸಹಚರರು. ಮಳೆ, ಗಾಳಿ, ಬಿಸಿಲು, ಹಿಮಪಾತ ಯಾವುದನ್ನೂ ಲೆಕ್ಕಿಸದೇ, ಶ್ವಾನಗಳು ಗಸ್ತು ಪಡೆಯ ಯೋಧರೊಂದಿಗೆ ನಿತ್ಯವೂ ಸಾಗುತ್ತವೆ. ಯಾವುದೇ ಅಪಾಯವಿದ್ದರೂ ಬೊಗಳುವ ಮೂಲಕ ಅವರನ್ನು ಎಚ್ಚರಿಸುತ್ತವೆ. ಈ ಶ್ವಾನ ಗಳೊಂದಿಗೆ ನಮಗೊಂದು ವಿಶಿಷ್ಟ ಬಂಧ ಬೆಸೆದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next