Advertisement
ವನ್ಯಜೀವಿ ಮಂಡಳಿ ಈ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಪೂರಕ ವಾಗಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಸಭೆಯಲ್ಲಿ ಘೋಷಿಸುವ ಭರವಸೆ ನೀಡಿದ್ದು, ಅರಣ್ಯ ಇಲಾಖೆ ಮುಖ್ಯಸ್ಥರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದರು.
ಜೇನು ಸಂತತಿ ಕಡಿಮೆಯಾಗಿದೆ. ಜೀವ ವೈವಿಧ್ಯದ ಮುಖ್ಯ ಕೊಂಡಿಯಾದ ಜೇನುಗಳು ಪರಕೀಯ ಪರಾಗಸ್ಪರ್ಶಕ್ಕೆ ಪೂರಕ. ಆದರೆ ಈ ಕ್ರಿಯೆ ಕ್ಷೀಣ ಗೊಂಡಿರುವುದರಿಂದ ಅರಣ್ಯ ವೃದ್ಧಿಗೆ ಧಕ್ಕೆಯಾಗಿದೆ. ಜತೆಗೆ ಘಟ್ಟ ಪ್ರದೇಶದ ಕೃಷಿ ಫಸಲು-ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಕ್ಷೀಣಿಸಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಅಡವಿ ಜೇನು ಸಂರಕ್ಷಣೆ ದೃಷ್ಟಿಯಿಂದ ತುಡವಿ ಜೇನು ರಾಜ್ಯ ಕೀಟವಾಗಿ ಘೊಷಣೆಯಾಗುವುದರ ಜತೆಗೆ ಅರಣ್ಯ ಇಲಾಖೆ ಮೂಲಕ ಸಂರಕ್ಷಣೆಯ ಹಲವು ಯೋಜನೆಗಳು ಕಾರ್ಯಗತಕ್ಕೆ ಬರಲಿವೆ.
Related Articles
ಉತ್ತರಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿÇÉೆಗಳಲ್ಲಿ ಕೂಡ ಜೇನು ಕೃಷಿಕರಿದ್ದಾರೆ. ಜೇನು ಹುಳ ಪರಿಸರ ಆರೋಗ್ಯ ಸೂಚಕ ಎಂದೇ ಗುರುತಿಸಿಕೊಂಡಿದೆ. ಪಾರಂ ಪರಿಕ, ಆಯುರ್ವೇದ ಔಷಧದಲ್ಲೂ ಬಳಕೆಯಾಗುತ್ತದೆ. ಜೇನು ಕೃಷಿ ಲಾಭದಾಯಕವಾಗಿದ್ದು, ಹಲವರಿಗೆ ಜೀವನಾಧಾರವೂ ಆಗಿದೆ.
Advertisement
ಜೇನುನೊಣ ವೃದ್ಧಿಗೆ ಕ್ರಮಪಶ್ಚಿಮ ಘಟ್ಟದಲ್ಲಿ ಹೆಜ್ಜೆàನು, ತುಡವಿ, ಕೋಲೆjàನು, ಮಿಸರು ಮತ್ತು ಇಟಲಿ ದುಂಬಿಗಳ ಸಂಖ್ಯೆ ಕ್ಷೀಣಿಸಿದೆ. ಇವುಗಳ ಸಂರಕ್ಷಣೆ ಮತ್ತು ಸಂತಾನ ಅಭಿವೃದ್ಧಿಗೆ ಬಿಳಿಸಾರೆ, ಬೂರಗ, ಮತ್ತಿ, ಬಸರಿ, ನೀರತ್ತಿ, ತಾರೆ, ಹೆದ್ದಿ, ಸಪ್ತಪರ್ಣಿ, ಬೈನೆ, ಬಣಗಿ ಮರಗಳನ್ನು ಕಡಿಯದಂತೆ ಅರಣ್ಯ ಇಲಾಖೆ ಕೂಡ ಕ್ರಮ ವಹಿಸುತ್ತಿದೆ. ಜೇನುಗಳಿಗೆ ಮಕರಂದ ಒದಗಿಸುವ ತಾರಿ, ಅಣಲೆ, ಅಂಟವಾಳ, ನಂದಿ, ಹುಲಿ ಬಳ್ಳಿ, ಹೊಂಗೆ, ಮಾವು, ಬೂರಗ, ಗುರಿಗೆ, ಪಾತಾಳ ಗರುಡ, ಲಕ್ಕಿ ಮತ್ತು ನೇರಳೆ ಗಿಡ-ಮರಗಳನ್ನು ಸಂರಕ್ಷಿಸಲಾಗುತ್ತಿದೆ. ಕಾಫಿ ಮತ್ತು ಚಹಾ ನಾಡುಗಳಲ್ಲಿ ತೋಟದಲ್ಲಿ ಬಳಸುತ್ತಿರುವ ಕ್ರಿಮಿನಾಶಕಗಳಿಂದ ಜೇನಿಗೆ ಹಾನಿಯಾಗುತ್ತಿದ್ದು, ಬಳಕೆಗೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗುತ್ತಿದೆ. ಸಿಎಂ ಭರವಸೆ
ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳೇ ಇದ್ದಾರೆ. ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದೇವೆ. ಅವರು ಸಮ್ಮತಿ ವ್ಯಕ್ತಪಡಿಸಿದ್ದಲ್ಲದೆ ಮುಂದಿನ ಸಭೆಯಲ್ಲಿ ಘೋಷಿಸುವ ಭರವಸೆ ನೀಡಿದ್ದಾರೆ. ಮಂಡಳಿ ಸಭೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
-ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಪಶ್ಚಿಮ ಘಟ್ಟ ಕಾರ್ಯಪಡೆ ಬಾಲಕೃಷ್ಣ ಭೀಮಗುಳಿ