Advertisement

ಆಲಮಟ್ಟಿ: ಸಸಿ ಪಡೆಯಲು ಅರಣ್ಯ ನರ್ಸರಿಯಲ್ಲಿ ರೈತರಿಂದ ನೂಕುನುಗ್ಗಲು; ಕೋವಿಡ್ ನಿಯಮ ಉಲ್ಲಂಘನೆ

01:58 PM Jun 16, 2021 | keerthan |

ವಿಜಯಪುರ: ಕೆಬಿಜೆಎನ್ಎಲ್ ಆಲಮಟ್ಟಿ ಅರಣ್ಯ ವಿಭಾಗದ ನರ್ಸರಿಯಲ್ಲಿ ಬುಧವಾರದಿಂದ ಸಸಿಗಳ ವಿತರಣೆ ಆರಂಭವಾಗಿದೆ. ಸಸಿಗಳನ್ನು ಪಡೆಯಲು ರೈತರು ನೂರಾರು ಸಂಖ್ಯೆಯಲ್ಲಿ ನರ್ಸರಿಗೆ ಆಗಿಮಿಸಿದ್ದು, ಕೋವಿಡ್ ನಿಯಮ ಮೀರಿ ಮುಗಿಬಿದ್ದಾರೆ.

Advertisement

ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅರಣ್ಯೀಕರಣ ಹೆಚ್ಚಿಸುವ ಕೋಡಿವೃಕ್ಷ ಅಭಿಯಾನ ಆರಂಭಗೊಂಡಿದೆ. ಮುಂಗಾರು ಮಳೆಗಾಲ ಆರಂಭದ ದಿನಗಳಲ್ಲಿ ಸಸಿಗಳನ್ನು ಪಡೆಯಲು ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ಅರಣ್ಯ ವಿಭಾಗದಿಂದ ಬುಧವಾರ ರೈತರಿಗೆ ಸಸಿ ವಿತರಣೆ ಆರಂಭಿಸಲಾಯಿತು. ಸಸಿ ವಿತರಣೆ ಕುರಿತು ಪ್ರಚಾರ ಮಾಧ್ಯಮಗಳ ಮೂಲಕ ರೈತರಿಗೆ ಮೊದಲೇ ದಿನಾಂಕ ತಿಳಿಸಲಾಗಿತ್ತು.

ಇದನ್ನೂ ಓದಿ:ಕೋವಿಡ್ ಹೆಚ್ಚಳ: ನಾಳೆಯಿಂದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿ ಸಂಪೂರ್ಣ ಲಾಕ್ ಡೌನ್

ಹೀಗಾಗಿ ದೂರದ ಊರಿಗಳಿಂದ ವಾಹನ ಸಮೇತ ಸಸಿ ಪಡೆಯಲು ರೈತರು ಆಗಮಿಸಿದ್ದು, ದಟ್ಟಣೆ ಹೆಚ್ಚಾಗಿದೆ.

Advertisement

ಎಷ್ಟೆಲ್ಲ ಜಾಗೃತಿ ಮೂಡಿಸಿ, ಕೋವಿಡ್ ನಿಯಮ ಪಾಲಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದರೂ ಕೇಳದ ರೈತರು, ಸಸಿಗಳನ್ನು ಪಡೆಯುವ ಧಾವಂತದಲ್ಲಿ ಕೋವಿಡ್ ನಿಯಮ ಮೀರಿ ಮುಗಿಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next