Advertisement

ಹವ್ಯಕ ಪರಿಷತ್‌ನಿಂದ ಕೋಟಿವೃಕ್ಷ ಅಭಿಯಾನ

07:25 AM Jul 23, 2017 | Team Udayavani |

ಕಡಬ : ಕೋಟಿವೃಕ್ಷ ಮನೆ ಮನೆ ಅಭಿಯಾನ ಕಾರ್ಯಕ್ರಮ ಕಡಬ ವಲಯ ಹವ್ಯಕ ಪರಿಷತ್‌ನ ನೇತೃತ್ವದಲ್ಲಿ ಕಡಬ ವಲಯದಾದ್ಯಂತ ಜರಗಿತು.

Advertisement

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಇಲಾಖೆಯ ಡಿಎಫ್‌ಒ ಸದಾಶಿವ ಭಟ್‌ ಅವರು ಕಾರ್ಯಕ್ರಮ ಔಚಿತ್ಯ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಮಾತನಾಡಿದರು. 

ನಿವೃತ್ತ ಮುಖ್ಯಶಿಕ್ಷಕ ಗಣಪತಿ ಭಟ್‌ ಮೇಗಿನಮನೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅರಣ್ಯ ಸಂರಕ್ಷಣೆ ಮತ್ತು ಗಿಡ ನೆಟ್ಟು ಪೋಷಿಸುವ ವಿಚಾರದ ಕುರಿತು ಮಾಹಿತಿ ನೀಡಿದರು. 

ಹವ್ಯಕ ಪರಿಷತ್‌ನ ಕಡಬ ವಲಯ ಕಾರ್ಯದರ್ಶಿ ಉದಯಕುಮಾರ್‌ ಭಟ್‌ ಕಜೆಮೂಲೆ ಅವರು ಸ್ವಾಗತಿಸಿ, ವಂದಿಸಿದರು. ಅಭಿಯಾನದ ಅಂಗವಾಗಿ ಬೇಡಿಕೆಗೆ ಅನುಸಾರವಾಗಿ ಕಾಚು, ಚಂದನ, ಬಿಲ್ವಪತ್ರೆ ಮುಂತಾದ ಗಿಡಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯವನ್ನು ಪಟ್ರೋಡಿ ಸೂರ್ಯನಾರಾಯಣ ಭಟ್‌ ಹಾಗೂ ಪಾಜೋವು ಶಿವಸುಬ್ರಹ್ಮಣ್ಯ ಭಟ್‌ ಅವರು ನಿರ್ವಹಿಸಿದರು.

ಸಮಾರೋಪ ಸಮಾರಂಭ
ಸಂಜೆ ಮಹಾಬಲ ಭಟ್‌ ಗೋಪಾಳಿ ಅವರ ನಿವಾಸದಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ  ಪ್ರಸಾದ್‌ ಭಟ್‌ ಮುನಿಯಂಗಳ ಅವರು ಗಿಡಗಳನ್ನು ನೆಟ್ಟು ಬೆಳೆಸಬೇಕಾದ ಪ್ರಾಮುಖ್ಯತೆಯನ್ನು ವಿವರಿಸಿದರು. ಡಿಎಫ್‌ಒ ಸದಾಶಿವ ಭಟ್‌ ಅವರು ಮಾತನಾಡಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಉದಯಕುಮಾರ್‌ ಭಟ್‌ ಕಜೆಮೂಲೆ, ಕೋಶಾಧಿಕಾರಿ ಗೋವಿಂದರಾಜ ಭಟ್‌ ಖಂಡಿಗ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next