Advertisement

ಕೋರಪರ್ತಿ ಕೆರೆ ಅಭಿವೃದ್ಧಿಗೆ ಕೋಟಿ ರೂ. ಮೀಸಲು

01:19 PM Oct 18, 2021 | Team Udayavani |

ಚಿಂತಾಮಣಿ: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಕೋರ‌್ಲಪರ್ತಿ ಸೇರಿ ಚಿಲಕನೇರ್ಪು ಹೋಬಳಿಯ ಕೆರೆಗಳು ತುಂಬಿ ಕೋಡಿ ಹರಿದಿದ್ದು, ನೀರಿನ ರಭಸಕ್ಕೆ ಕುಸಿತಗೊಂಡಿರುವ ಸೇತುವೆ ದುರಸ್ತಿ ಸೇರಿ ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ತಿಳಿಸಿದರು.

Advertisement

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೋರ‌್ಲಪರ್ತಿ, ತಲಕಾಯಲಬೆಟ್ಟ ವೆಂಕಟೇಶ್ವರ ಕೆರೆಗೆ ಬಾಗಿನ ಅರ್ಪಿಸಿ ಕೆರೆಯ ಕಟ್ಟೆ ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಹಲವೆಡೆ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿ ಜನ ಜಾನುವಾರು ಕೊಚ್ಚಿಹೋಗಿ ಮನೆಗಳು ಕುಸಿದು ಕೋಟ್ಯಂತರ ರೂ. ನಷ್ಟವಾಗಿದ್ದ ವೇಳೆ ನಮಗೆ ಮಳೆಯೇ ಇಲ್ಲ ಎಂದು ಅಂಗಲಾಚುತ್ತಿದ್ದ ನಮಗೆ, ಈಗ ಹೆಚ್ಚು ಮಳೆ ಆಗಿ, ತಾಲೂಕಿನ ಹತ್ತಾರು ಕೆರೆಗಳು ತುಂಬಿ ಕೋಡಿ ಹರಿದಿವೆ ಎಂದು ಹೇಳಿದರು.

 ಸುಖ ಶಾಂತಿಯಿಂದ ಬಾಳಲಿ: ಹಲವು ಗ್ರಾಮಗಳ ಸಂಪರ್ಕ ಸೇತುವೆಗಳು ಮುರಿದು ಬಿದ್ದಿವೆ. ಇದರಿಂದ ಜನ ಸಂಚಾರ ಅಸ್ತವ್ಯಸ್ತವಾಗಿದೆ. ಜನ ಪರದಾ ಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಳೆಯಿಂದ ಸ್ವಲ್ಪ ನಷ್ಟವಾದರೂ ಹೆಚ್ಚಿನ ಲಾಭವಾಗಿದೆ. ಸಾವಿರಾರು ಕೊಳವೆ ಬಾವಿಗಳು ಪುನಾರಂಭವಾಗಿವೆ.

ಅಂತರ್ಜಲ ಮಟ್ಟ ಹೆಚ್ಚಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದೇ ರೀತಿ ಮಳೆ ಬೆಳೆಗಾಗಿ ಜನ ಸುಖಶಾಂತಿಯಿಂದ ಬಾಳಲಿ ಎಂದರು. ಕೋಟಿ ರೂ. ಅನುದಾನ ಮೀಸಲು: ಇನ್ನು ಚಿಲಕಲನೇರ್ಪು ಹೋಬಳಿಯ ಬಹುದೊಡ್ಡ ಕೆರೆಗಳಲ್ಲಿ ಒಂದಾದ ಕೋರ‌್ಲಪರ್ತಿ ಕೆರೆ ಅಭಿವೃದ್ಧಿಗೆ ಈಗಾಗಲೇ ಒಂದು ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲಿ ಕೆರೆ ಅಭಿವೃದ್ಧಿ ಸೇರಿ ಪಕ್ಕದ ಸೇತುವೆ ದುರಸ್ತಿ ಮಾಡಿ ಜನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ;- ವರಾಹಗಿರಿ ಬೆಟ್ಟ ಪ್ರವಾಸಿ ತಾಣ ಮಾಡಲು ಸಿದ್ಧ

Advertisement

 ಸೇತುವೆಗಳ ದುರಸ್ತಿ: ಇನ್ನು ಚಿಲಕಲನೇರ್ಪು ಹೋಬಳಿಯಲ್ಲಿ ಹಲವು ಸೇತುವೆಗಳು ಕುಸಿದು ಜನ ಸಂಚಾರಕ್ಕೆ ತೊಂದರೆ ಆಗಿದ್ದರಿಂದ ಪ್ರವಾಹ ಪರಿಹಾರ ನಿಧಿಯಿಂದ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಏರಿ ಶೀಘ್ರದಲ್ಲಿ ಸೇತುವೆಗಳನ್ನು ದುರಸ್ತಿ ಮಾಡಲಾಗುವುದು ಎಂದು ತಿಳಿಸಿದರು.

ಹುಚ್ಚು ಸಾಹಸಕ್ಕೆ ಮುಂದಾಗಬೇಡಿ: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಉಕ್ಕಿ ಹರಿಯುತ್ತಿರುವ ನದಿಗಳ ದಡದಲ್ಲಿ, ಕೆರೆಗಳ ಕೋಡಿಗಳ ಬಳಿ ಹೋಗಿ ಸೆಲ್ಫಿ ತೆಗೆಯುವುದು, ಆಟವಾಡುವುದು, ಈಜು ವಂತಹ ಸಾಹಸಕ್ಕೆ ಹೋಗಬೇಡಿ, ನೆಮ್ಮದಿಯಿಂದ ಮನೆಗಳಲ್ಲಿ ಇರಿ ಎಂದು ಯುವಜನರಿಗೆ ಮನವಿ ಮಾಡಿದರು.

ಈ ವೇಳೆ ಮುಖಂಡರಾದ ಕೆ.ದೇವಗಾನಹಳ್ಳಿ ಮದ್ದಿರೆಡ್ಡಿ, ಪಾಪತಿಮ್ಮನಹಳ್ಳಿ ಮಲ್ಲಿಕಾರ್ಜುನರೆಡ್ಡಿ, ಕೋನಪರೆಡ್ಡಿ, ರಾಮಚಂದ್ರಾರೆಡ್ಡಿ, ಕೋರ‌್ಲಪರ್ತಿ ಗ್ರಾಪಂ ಮಾಜಿ ಸದಸ್ಯ ಕೆ.ವಿ.ವೆಂಕಟನಾರಾಯಣ, ಹಾಲಿ ಸದಸ್ಯ ವೇಣು, ಮಾಜಿ ತಾಪಂ ಸದಸ್ಯ ನಡಂಪಲ್ಲಿ ಶ್ರೀನಿವಾಸ್‌, ಕೆಂಚಾರ‌್ಲಹಳ್ಳಿ ಭಾಸ್ಕರ್‌, ಅನಪಲ್ಲಿ ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next