Advertisement

ವನ್ಯಜೀವಿಗಳಿಂದ ಬೆಳೆ ಹಾನಿ:ಸೋಲಾರ್‌ ಬೇಲಿ ನಿರ್ಮಿಸಿ

02:30 PM Sep 28, 2018 | |

ತೀರ್ಥಹಳ್ಳಿ: ವನ್ಯ ಜೀವಿಗಳಿಂದ ಸಾಗುವಳಿ ಪ್ರದೇಶ ಬೆಳೆಗಳಿಗೆ ಹಾನಿಯಾಗುತ್ತಿದ್ದು, ನಿಯಂತ್ರಣಕ್ಕಾಗಿ ಸೋಲಾರ್‌ ಬೇಲಿ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಆಗ್ರಹಿಸಿ ಆರಗ ಗ್ರಾಪಂ ಅಧ್ಯಕ್ಷ ಜಗದೀಶ್‌ ನೇತೃತ್ವದಲ್ಲಿ ನೆಕ್ಕರಗೋಡು ಗ್ರಾಮದ ರೈತರ ನಿಯೋಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ಕಳೆದ ಕೆಲವು ತಿಂಗಳಿಂದ ಆರಗ ಭಾಗದ ಹಲವೆಡೆ ವನ್ಯಜೀವಿಗಳಿಂದ ಸಾಗುವಳಿ ಪ್ರದೇಶದ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದೆ. ಬೆಳೆಗಳನ್ನು ರಕ್ಷಿಸಲು ರೈತರು ಹರಸಾಹಸ ಪಡುವಂತಾಗಿದೆ. ಬೆಳೆ ರಕ್ಷಣೆಗಾಗಿ ಸಾಗುವಳಿ ಪ್ರದೇಶದಲ್ಲಿ ಸೋಲಾರ್‌ ಬೇಲಿಯನ್ನು ನಿರ್ಮಾಣಗೊಳಿಸುವಂತಾದರೆ ಬೆಳೆಗಳನ್ನು ಸಂರಕ್ಷಿಸಿಕೊಳ್ಳಬಹುದು. ಈ ಭಾಗದಲ್ಲಿ ಕಾಡುಕೋಣಗಳ ವಿಪರೀತ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ ಎಂದು ರೈತರು ಮನವಿಯಲ್ಲಿ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ಸೋಲಾರ್‌ ಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆಯಲ್ಲಿ ಹಲವು ಷರತ್ತುಗಳಿವೆ. ಇದರ ಅನ್ವಯ ಸಹಾಯಧನದ ಅವಕಾಶವಿದೆ. ಸೋಲಾರ್‌ ಬೇಲಿ ನಿರ್ಮಾಣಕ್ಕೆ ಅಗತ್ಯ ಅನುದಾನ ಕೋರಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.  ರೈತರಾದ ಕೃಷ್ಣಮೂರ್ತಿ ಮಂಜುನಾಥ್‌, ಗಿರೀಶ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next