ಹರಪನಹಳ್ಳಿ: ರಸ್ತೆಯಲ್ಲಿ ರಾಗಿ, ಮಕ್ಕೆಜೋಳ, ತೊಗರಿಬೆಳೆ ಹಾಕಿ ಒಕ್ಕಲುತನ ಮಾಡುತ್ತಿದ್ದ ರೈತರ ವಿರುದ್ಧ ಕೆಂಡಮಂಡಲರಾದ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಅವರು ಜೆಸಿಬಿ ಯಂತ್ರ ಬಳಿಸಿ ರಸ್ತೆಯಲ್ಲಿ ಹಾಕಿದ್ದ ಬೆಳೆ ರಸ್ತೆಯಿಂದ ಹೊರಕ್ಕೆ ಹಾಕಿಸಿದರು.
ಮಂಗಳವಾರ ಕೆಲವೆಡೆ ರಸ್ತೆಯಲ್ಲಿ ಹಾಕಿದ್ದ ಬೆಳೆಗಳನ್ನು ತೆಗೆಸಿದ್ದ ನ್ಯಾಯಾಧೀಶರು ಉಪವಿಭಾಗಾಧಿ ಕಾರಿ ಕೆ.ವಿ. ಪ್ರಸನ್ನಕುಮಾರ್, ತಹಶೀಲ್ದಾರ್ ಎಲ್.ಎಂ. ನಂದೀಶ್, ಪಿಎಸ್‌ಐ ಸಿ. ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೆಗೌಡ, ಲೋಕೊಪಯೋಗಿ ಇಲಾಖೆ ಎಇಇ ಎಂ. ಲಿಂಗಪ್ಪ ಒಳಗೊಂಡ ಅಧಿ ಕಾರಿಗಳ ತಂಡದೊಂದಿಗೆ ಬುಧವಾರ ಕೂಡ ಜಾಗೃತಿ ಮೂಡಿಸುವ ಕಾರ್ಯ ಮುಂದುವರೆಸಿದ್ದರು. ತಾಲೂಕಿನ ಯಲ್ಲಪುರ, ತೋಗರಿಕಟ್ಟಿ, ನಾರಾಯಣಪುರ, ಹುಲಿಕಟ್ಟೆ, ಹಾರಕನಾಳು ಗ್ರಾಮದ ರಸ್ತೆಯಲ್ಲಿ ಒಕ್ಕಲುತನ ಮಾಡುತ್ತಿದ್ದ ರೈತರಿಗೆ ತರಾಟೆಗೆ ತೆಗೆದುಕೊಂಡ ಅವರು ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಇದನ್ನೂ ಓದಿ:ಗ್ರಾಪಂ ಸದಸ್ಯರು ಜನ ಸೇವಕರಾಗಿ ಕೆಲಸ ಮಾಡಲಿ : ರಾಜ್ಯದಲ್ಲಿ ಗೆದ್ದಿದ್ದಾರೆ 5,246 ಬೆಂಬಲಿತರು
ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಕಟಾವು ಮಾಡಿಕೊಂಡು ಒಕ್ಕಲು ಮಾಡಿಕೊಳ್ಳಲು ಕಣಗಳನ್ನು ಬಳಸಿಕೊಳ್ಳದೇ ಸಾರ್ವಜನಿಕರು ಸಂಚರಿಸುವ ರಸ್ತೆಗಳನ್ನು ಅಶ್ರಯಿಸಬಾರದು ಎಂದ ನ್ಯಾಯಾಧಿಧೀಶರು ರಸ್ತೆಯಲ್ಲಿಹಾಕಿದ್ದ ಮೆಕ್ಕೆಜೋಳ, ರಾಗಿ, ತೊಗರಿಬೆಳೆಗಳನ್ನು ಜೆಸಿಬಿ ಯಂತ್ರ ಹಾಗೂ ಟ್ರಾÂಕ್ಟರ್ ಬಳಿಸಿ ರಸ್ತೆ ಬದಿಯಲ್ಲಿರುವ ಜಮೀನುಗಳಿಗೆ ಹಾಕಿಸಿದರು.
ಚುನಾಯಿತ ಪ್ರತಿನಿಧಿ ಗಳು ಹಾಗೂ ಅಧಿ ಕಾರಿಗಳು ರೈತರಿಗೆ ಕಣಗಳನ್ನು ಬಳಸುವಂತೆ ಮನವೊಲಿಸಬೇಕು. ಮಾತು ಕೇಳದೆ ಇರುವವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಸರ್ಕಾರದಿಂದ ಪಡೆಯುತ್ತಿರುವ ಎಲ್ಲ ಸೌಲಭ್ಯಗಳನ್ನು ವಂಚಿತರನ್ನಾಗಿ ಮಾಡಬೇಕು ಎಂದು ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಅಭಿಪ್ರಾಯಪಟ್ಟರು. ಇಂಜಿನಿಯರ್ ಕುಬೇಂದ್ರನಾಯ್ಕ, ಪಿಡಿಓ ಚಂದ್ರನಾಯ್ಕ ಇತರರಿದ್ದರು.