Advertisement

ಬಾವಿಗೆ ಬಿದ್ದ ಮೊಸಳೆ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

06:16 PM Mar 23, 2022 | Team Udayavani |

ರಬಕವಿಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯ ಬಾವಿಯಲ್ಲಿ ಬಂದು ಸೇರಿದ್ದ ಮೊಸಳೆಯನ್ನು ಬುಧವಾರ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಅವಿರತ ಪ್ರಯತ್ನದಿಂದ ಅದನ್ನು ಮೇಲಕ್ಕೆತ್ತಿ ಸುರಕ್ಷತ ಸ್ಥಳಕ್ಕೆ ಬಿಟ್ಟು ಬರುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Advertisement

ಕಳೆದ ಎರಡು ದಿನಗಳ ಹಿಂದೆ ಕುಲಹಳ್ಳಿಯ ಶ್ರೀಶೈಲ ತೇಲಿಯವರ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ಅದನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಎರಡು ದಿನಗಳಿಂದ ಪ್ರಯತ್ನ ಪಟ್ಟರು ಸಾಧ್ಯವಾಗಿರಲಿಲ್ಲ. ಆದರೆ ಇಂದು ಅದು ಹೇಗೋ ನಿನ್ನೆ ಪಕ್ಕದ ಬಾವುರಾವ್ ಶಿಂಧೆ ಅವರ ಬಾವಿಯೊಳಗೆ ಬಿದ್ದಿದ್ದು ನಿನ್ನೆ ಮಂಗಳವಾರ ರಾತ್ರಿ 10.30 ರವರೆಗೆ ಕಾರ್ಯಾಚರಣೆ ಮಾಡಿದರು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಬುಧವಾರ ಮಧ್ಯಾಹ್ನ 12.30 ರ ಸುಮಾರಿಗೆ ಅದನ್ನು ಮೇಲೆತ್ತುವಲ್ಲಿ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಮೊಸಳೆ ಮೇಲೆತ್ತಲು ಯರಗಟ್ಟಿ ಗ್ರಾಮದ ಮೀನುಗಾರರಾದ ಲಾಲು ಮೋರೆ, ಅರಣ್ಯ ಇಲಾಖೆ ಅಧಿಕಾರಿ ಮಲ್ಲೇಶ ನಾವಿ, ಸಿಬ್ಬಂದಿಗಳಾದ ಆರ್. ಎಲ್. ಜಾಧವ, ಮಹೇಶ ಎನ್, ಎಚ್. ವಾಯ್. ಉಗಾರ, ಆರ್. ಬಿ. ಮೇತ್ರಿ, ಲಕ್ಷö್ಮಣ ಪಾಟೀಲ, ಮಹಾವೀರ ಆಲಗೂರ, ಸುಭಾಸ ವಾರದ, ಸದಾಶಿವ ಮಾಂಗ, ಅಶೋಕ ಸಣ್ಣಕ್ಕಿ ಗ್ರಾಮಸ್ಥರಾದ ಪಾಂಡುರಂಗ ಸಾಲ್ಗುಡೆ, ಚಕ್ಕಪ್ಪ ಕಾಂಬ್ಳೆ, ಮುದಕಪ್ಪ ಪವಾರ, ಶ್ರೀಶೈಲ ಸಾಲ್ಗುಡೆ, ಮಹೇಶ ತೇಲಿ, ಸುನೀಲ ಸಿಂಧೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next