Advertisement

Crocodile: ಕೆರೆ ಬಳಿ ಪತ್ತೆಯಾದ ಮೊಸಳೆಯನ್ನು ಸೆರೆ ಹಿಡಿದು ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

09:44 AM Nov 09, 2023 | Team Udayavani |

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯ ಸಾಣಾಪೂರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಮೊಸಳೆಯನ್ನು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.

Advertisement

ಹಲವು ದಿನಗಳಿಂದ ಸಾಣಾಪೂರ ಕೆರೆಯ ತಟದಲ್ಲಿ ನಿತ್ಯವೂ ಮೊಸಳೆ ಪ್ರತ್ಯಕ್ಷವಾಗುತ್ತಿತ್ತು . ಕುರಿಗಾಯಿಗಳು, ದನ ಮೇಯಿಸುವವರು, ಪ್ರವಾಸಿಗರು ಮತ್ತು ಜಂಗ್ಲಿ, ರಂಗಾಪೂರಕ್ಕೆ ತೆರಳುವವರು ಭಯಭೀತಗೊಂಡಿದ್ದರು.

ಈ ಕುರಿತು ಗ್ರಾಮಸ್ಥರು ಅರಣ್ಯ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಸರಿಗಳಿಗೆ ಮಾಹಿತಿ ನೀಡಿದ್ದರು. ಗುರುವಾರ ಬೆಳಗಿನ ಜಾವ ಕೆರೆಯ ತಟದಲ್ಲಿ ಮೊಸಳೆ ಮಲಗಿದ್ದನ್ನು ಕಂಡ ಕೃಷಿ ಕಾರ್ಯಕ್ಕೆ ತೆರಳುವವರು ಮತ್ತು ವಾಕಿಂಗ್ ಗೆ ಆಗಮಿಸಿದವರು ಸೇರಿ ಹಗ್ಗದಿಂದ ಮೊಸಳೆಯನ್ನು ಕಟ್ಟಿ ಹಾಕಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಮೇಲಾಧಿಕಾರಿಗಳ ಆದೇಶದಂತೆ ಮೊಸಳೆಯನ್ನು ಬೇರೆಡೆ ಬಿಡಲಾಗುತ್ತದೆ ಎಂದು ಉದಯವಾಣಿ ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Internet Ban: ನಿಲ್ಲದ ಹಿಂಸಾಚಾರ… ಮಣಿಪುರದಲ್ಲಿ ನ.13 ರವರೆಗೆ ಇಂಟರ್ನೆಟ್ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next