ನ್ಯೂಯಾರ್ಕ್: ನೀರಿನಲ್ಲಿರುವ ಅತ್ಯಂತ ಅಪಾಯಕಾರಿ ಪ್ರಾಣಿಯೆಂದರೆ ಮೊಸಳೆ ಹಾಗಾಗಿ ಕಾಡು ಪ್ರಾಣಿಗಳು ತಮ್ಮ ದಾಹ ತಣಿಯಲು ನೀರು ಕುಡಿಯುವ ವೇಳೆ ಮೊಸಳೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಸಜ್ಜಾಗಿ ನೀರು ಕುಡಿಯುತ್ತವೆ, ಯಾವ ಹೊತ್ತಿಗೆ ಮೊಸಳೆ ದಾಳಿ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಕಾಡು ಪ್ರಾಣಿಗಳು ಭಯದಿಂದಲೇ ನೀರು ಕುಡಿಯುತ್ತವೆ. ಆದರೆ ಇದೀಗ ಕೋಸ್ಟರಿಕಾದ ಮಟಿನಾ ನದಿಯಲ್ಲಿ ಬೇಟೆಗಾರನೊಬ್ಬ ಬೇಟೆಯಾಡಿದ ಮೊಸಳೆಯ ಹೊಟ್ಟೆಯೊಳಗೆ ಬಾಲಕನ ದೇಹದ ಅವಶೇಷಗಳು ಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿವೆ.
ಕಳೆದ ತಿಂಗಳು ಅಕ್ಟೋಬರ್ 30 ರಂದು ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ ಬಾಲಕ ತನ್ನ ಪೋಷಕರು ಹಾಗೂ ಸಂಬಂಧಿಕರ ಜೊತೆ ಕೋಸ್ಟರಿಕಾದ ಲಿಮನ್ ನಗರದಲ್ಲಿರುವ ಮಟಿನಾ ನದಿಯ ದಡಕ್ಕೆ ತೆರಳಿದ್ದಾರೆ ಈ ವೇಳೆ ಪೋಷಕರು ನದಿಯಲ್ಲಿ ಮೀನು ಹಿಡಿಯುತಿದ್ದರೆ ಜೂಲಿಯೊ ಓಟೆರೊ ನದಿ ನೀರಿನಲ್ಲಿ ಆಟವಾಡುತ್ತಿದ್ದ, ಆದರೆ ಇವರಿಗೆ ಈ ನದಿಯಲ್ಲಿ ಮೊಸಳೆ ಇರುವುದು ಗೊತ್ತಿರಲಿಲ್ಲ, ದುರದೃಷ್ಟವಶಾತ್ ನದಿಯಲ್ಲಿದ್ದ ಮೊಸಳೆ ಪೋಷಕರ ಎದುರೇ ಬಾಲಕನ ಮೇಲೆ ದಾಳಿ ಮಾಡಿ ನೀರಿನೊಳಗೆ ಎಳೆದೊಯ್ದಿದೆ ಇದನ್ನು ಕಂಡ ಪೋಷಕರು ಕಂಗಾಲಾಗಿದ್ದಾರೆ, ಒಮ್ಮೆಗೆ ಏನು ಮಾಡಬೇಕೆನ್ನುವುದೇ ಅವರಿಗೆ ತೋಚಲಿಲ್ಲ, ಬಳಿಕ ಕೆಲವು ಹೊತ್ತಿನ ಬಳಿಕ ಬಾಲಕನನ್ನು ನೀರಿನ ಮೇಲೆ ಎಳೆ ತಂದ ಮೊಸಳೆ ಮತ್ತೊಮ್ಮೆ ಬಾಲಕನ ತಲೆಯನ್ನೇ ತುಂಡರಿಸಿ ನೀರಿನೊಳಗೆ ಎಳೆದೊಯ್ದಿದಿತ್ತು.
ಇದಾದ ಒಂದು ತಿಂಗಳ ಬಳಿಕ ಅಂದರೆ ನವೆಂಬರ್ 26 ರಂದು ಬೇಟೆಗಾರನೊಬ್ಬ ಇದೆ ನದಿಯಲ್ಲಿ ಮೊಸಳೆಯನ್ನು ಬೇಟೆಯಾಡಿದ್ದಾನೆ ಆದರೆ ಪ್ರಾಣಿ ಬೇಟೆ ಅಪರಾಧವಾಗಿರುವುದರಿಂದ ಹೆದರಿದ ಬೇಟೆಗಾರ ಮೊಸಳೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ, ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮೊಸಳೆಯ ಹೊಟ್ಟೆ ಸೀಳಿದಾಗ ಹೊಟ್ಟೆಯೊಳಗೆ ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ. ಇದೆಲ್ಲವನ್ನು ಕಂಡಾಗ ತಿಂಗಳ ಹಿಂದೆ ಮೊಸಳೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಜೂಲಿಯೊ ಒಟೆರೊ ಫೆರ್ನಾಂಡಿಸ್ ಅವನ ದೇಹದ ಭಾಗಗಳೇ ಇರಬಹುದು ಎಂದು ಹೇಳಲಾಗಿದೆ. ಸದ್ಯ ಅಧಿಕಾರಿಗಳ ತಂಡ ಮೊಸಳೆಯ ಹೊಟ್ಟೆಯಲ್ಲಿ ಸಿಕ್ಕಿದ, ತಲೆಕೂದಲು, ಎಲುಬುಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್… ಚಾಲಕನ ಸಮಯ ಪ್ರಜ್ಞೆ, ತಪ್ಪಿದ ದುರಂತ