ದೋಹಾ: ಸದ್ಯ ಪೋರ್ಚುಗಲ್ ತಂಡದ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕತಾರ್ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ಈ ಮಧ್ಯೆ ಅವರು ಮಂಗಳವಾರ ದಿಢೀರ್ ನಿರ್ಧಾರವನ್ನು ಪ್ರಕಟಿಸಿ, ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರ ನಡೆದಿದ್ದಾರೆ. ಆ ತಂಡ ಬೇರೆ ಸದ್ಯ ಮಾರಾಟಕ್ಕಿದೆ!
ಈಗಾಗಲೇ 38 ವರ್ಷಕ್ಕೆ ಮುಟ್ಟಿರುವ ರೊನಾಲ್ಡೊ ಮುಂದಿರುವ ದೊಡ್ಡ ಪ್ರಶ್ನೆಯೆಂದರೆ, ಅವರನ್ನು ಯಾರು ಕೊಳ್ಳುತ್ತಾರೆ ಎನ್ನುವುದು. ಇದಕ್ಕೂ ಮುನ್ನ ಅವರು ಜ್ಯುವೆಂಟಸ್ ಪರ ಆಡಿದ್ದರು. ಅದಕ್ಕೂ ಮೊದಲು ವಿಶ್ವವಿಖ್ಯಾತ ರಿಯಲ್ ಮ್ಯಾಡ್ರಿಡ್ ಕ್ಲಬ್ ಅನ್ನು ದೀರ್ಘಕಾಲ ಪ್ರತಿನಿಧಿಸಿದ್ದರು.ಇನ್ನವರು ನೆಪೋಲಿ ಬೀ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.
ಆದರೆ ಸದ್ಯ ರೊನಾಲ್ಡೊ ಲಯ ಹೇಳಿಕೊಳ್ಳುವಂತಿಲ್ಲ. ಮ್ಯಾಂಚೆಸ್ಟರ್ ಪರ ಅವರು ಬಹುತೇಕ ಪಂದ್ಯಗಳಲ್ಲಿ ಬೆಂಚು ಕಾಯಿಸಿದ್ದರು!