Advertisement

ಅಲ್ ನಾಸರ್ ಗೆ ವಿದಾಯ? ಕ್ರಿಸ್ಟಿಯಾನೊ ರೊನಾಲ್ಡೊ ಕ್ಲಬ್‌ ಆಟ ಮುಕ್ತಾಯ?

12:56 PM May 04, 2023 | Team Udayavani |

ರಿಯಾಧ್‌: ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ತ್ಯಜಿಸಿ ಸೌದಿ ಅರೇಬಿಯದ ಅಲ್‌ ನಾಸ್ರ್ ತಂಡವನ್ನು ಕೂಡಿಕೊಂಡ ಫ‌ುಟ್‌ಬಾಲ್‌ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ಲಿಂದಲೂ ಹೊರಬೀಳಲಿದ್ದಾರಾ? ಹೌದು ಎನ್ನುತ್ತವೆ ಮೂಲಗಳು.

Advertisement

ಒಂದು ಕಾಲದಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡದ ಪರ ಆಡಿ ಅದನ್ನು ಆಳಿದ್ದ ಕ್ರಿಸ್ಟಿಯಾನೊ ರೊನಾಲ್ಡೊ, ಈಗ ಮತ್ತೆ ಅದೇ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಆಟಗಾರನಾಗಿಯಲ್ಲ, ರಾಯಭಾರಿಯಾಗಿ! ಹೀಗೆ ನೋಡಿದರೆ ರೊನಾಲ್ಡೊ ಫುಟ್‌ ಬಾಲ್‌ ಆಟ ಅಧಿಕೃತವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ ಎಂದೇ ಹೇಳಬಹುದು.

ಅಲ್‌ ನಾಸ್ರ್ ಪರ 12 ಗೋಲು ಬಾರಿಸಿ ಸೌದಿ ಅರೇಬಿಯ ಲೀಗ್‌ನಲ್ಲಿ ತಂಡವನ್ನು 2ನೇ ಸ್ಥಾನಕ್ಕೆ ರೊನಾಲ್ಡೊ ಒಯ್ದಿದ್ದಾರೆ. ಈಗವರಿಗೆ ರಿಯಲ್‌ ಮ್ಯಾಡ್ರಿಡ್‌ನಿಂದ ಕರೆ ಬಂದಿದೆ, ರಾಯಭಾರಿಯಾಗುವ ಅವಕಾಶ ನೀಡಲಾಗಿದೆ. ಇದನ್ನು ರೊನಾಲ್ಡೊ ಕೂಡ ಒಪ್ಪಿಕೊಳ್ಳುವ ನಿರೀಕ್ಷೆಯಿದೆ. ಅದಾಗಿದ್ದೇ ಆದರೆ ಅಲ್‌ ನಾಸ್ರ್ಗೆ ಅವಧಿಗೆ ಮುನ್ನವೇ ಅವರು ವಿದಾಯ ಹೇಳುತ್ತಾರೆ. ಜೊತೆಗೆ ಲೀಗ್‌ ಮಾದರಿಯ ಫ‌ುಟ್‌ಬಾಲ್‌ನಲ್ಲೂ ಅವರ ಆಟ ಮುಗಿಯಬಹುದು.

ಇನ್ನು ಮುಂದಿನ ವರ್ಷ ಜೂನ್‌, ಜುಲೈನಲ್ಲಿ ನಡೆಯುವ ಯೂರೊ ಕಪ್‌ನಲ್ಲಿ ಪೋರ್ಚುಗಲ್‌ ಪರ ಆಡಲು ಅವರು ಬಯಸಿದ್ದಾರೆ. ಅಂತಾರಾಷ್ಟ್ರೀಯವಾಗಿ ಅದೇ ಅವರ ಕಡೆಯ ಕೂಟವಾಗುವುದು ನಿಶ್ಚಿತ. ಆದರೆ ಈ ತಂಡಕ್ಕೆ ಅವರು ಆಯ್ಕೆಯಾಗುತ್ತಾರಾ ಎನ್ನುವುದೇ ಪ್ರಶ್ನೆ. ಆ ಹೊತ್ತಿಗೆ 39 ವರ್ಷವಾಗಿರುವುದರಿಂದ, ಇದೇ ಅವರ ಆಯ್ಕೆಗೆ ಸಮಸ್ಯೆಯಾಗಬಹುದು.

ರಿಯಲ್‌ ಮ್ಯಾಡ್ರಿಡ್‌ನ‌ಲ್ಲಿ: ಹಿಂದೆ ಸ್ಪೇನಿನ ಈ ಖ್ಯಾತ ತಂಡದ ಪರ 438 ಪಂದ್ಯವಾಡಿದ್ದ ಅವರು 451 ಗೋಲುಗಳನ್ನು ಬಾರಿಸಿದ್ದರು. ಅನಂತರ ಜ್ಯೂವೆಂಟಸ್‌ಗೆ ತೆರಳಿದ್ದರು. ಅದನ್ನೂ ತ್ಯಜಿಸಿ ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಕಾಲಿಟ್ಟಿದ್ದರು. ಕಳೆದ ವರ್ಷದ ಕೊನೆಗೆ ಆ ತಂಡದ ಸಂಬಂಧ ಕಡಿದುಕೊಂಡು ಈ ವರ್ಷಾರಂಭದಲ್ಲಿ ಅಲ್‌ ನಾಸ್ರ್ ಗೆ ಸೇರಿದ್ದರು. ಆದರೆ ಕೆಲವೇ ತಿಂಗಳಲ್ಲಿ ಈ ತಂಡದೊಂದಿಗೆ ಅವರ ಬಾಂಧವ್ಯ ಮುಗಿಯುವ ಹಂತಕ್ಕೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next