ಅಲ್ ಹಾಸಾ (ಸೌದಿ ಅರೇಬಿಯ): ಪೋರ್ಚುಗಿಸ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿಷ್ಠಿತ ಅಲ್ ನಾಸರ್ ಕ್ಲಬ್ ಪರ ಮೊದಲ ಗೋಲು ಬಾರಿಸುವ ಮೂಲಕ “ಮೌನ’ ಮುರಿದಿದ್ದಾರೆ.
ಶುಕ್ರವಾರ ರಾತ್ರಿ ಅಲ್ ಫತೇಹ್ ವಿರುದ್ಧ ನಡೆದ ಸೌದಿ ಪ್ರೊ ಲೀಗ್ ಫುಟ್ ಬಾಲ್ ಪಂದ್ಯದ ಸ್ಟಾಪೇಜ್ ಸಮಯದಲ್ಲಿ ಗೋಲು ಸಿಡಿಸಿದ ಅವರು ಪಂದ್ಯವನ್ನು 2-2 ಅಂತರದಿಂದ ಡ್ರಾಗೊಳಿಸಲು ನೆರವಾದರು.
ಪಂದ್ಯದ 90 ಪ್ಲಸ್ 3ನೇ ನಿಮಿಷದ ತನಕ ಅಲ್ ಫತೇಹ್ 2-1ರ ಮುನ್ನಡೆಯೊಂದಿಗೆ ಗೆಲುವಿನ ಹಾದಿಯಲ್ಲಿತ್ತು. ಆದರೆ ಆಗ ಲಭಿಸಿದ ಪೆನಾಲ್ಟಿಯೊಂದನ್ನು ರೊನಾಲ್ಡೊ ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದರು.
ಬಾರ್ಸಿಲೋನಾದ ಮಾಜಿ ಆಟಗಾರ ಕ್ರಿಸ್ಟಿಯನ್ ಟೆಲ್ಲೊ 12ನೇ ನಿಮಿಷದಲ್ಲಿ ಗೋಲು ಬಾರಿಸಿ ಅಲ್ ಫತೇಹ್‌ಗೆ ಮುನ್ನಡೆ ತಂದಿತ್ತರು. ಬಳಿಕ 42ನೇ ನಿಮಿಷದಲ್ಲಿ ಟೆಲಿಸ್ಕ ಪಂದ್ಯವನ್ನು ಸಮಬಲಕ್ಕೆ ತಂದರು. ವಿರಾಮದ ವೇಳೆ ಪಂದ್ಯ 1-1 ಸಮಬಲದಲ್ಲಿ ನೆಲೆಸಿತ್ತು.
Related Articles
58ನೇ ನಿಮಿಷದಲ್ಲಿ ಸೋಫಿಯೇನ್‌ಅಲ್ ಫತೇಹ್‌ಗೆ ಮತ್ತೆ ಮುನ್ನಡೆ ತಂದಿತ್ತರು.