Advertisement

ಕುವೈಟ್‌ನಲ್ಲಿಅತಂತ್ರ; ಕೊಡಗಿನ ಮಹಿಳೆಗೆ ಮಧ್ಯವರ್ತಿಯಿಂದ ವೀಸಾ ವಂಚನೆ

01:05 AM Jan 17, 2023 | Team Udayavani |

ಮಡಿಕೇರಿ: ಮಧ್ಯವರ್ತಿಯ ವಂಚನೆಗೆ ಸಿಲುಕಿ ಕುವೈಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಿದ್ದಾಪುರದ ಕರಡಿಗೋಡು ಗ್ರಾಮದ ಪಾರ್ವತಿ ಅವರ ರಕ್ಷಣೆಗೆ ಕೊಡಗು ಜಿಲ್ಲಾಡಳಿತ ಮುಂದಾಗಿದೆ.

Advertisement

ವಿಸಿಟಿಂಗ್‌ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಯಾವುದೋ ಒಂದು ಸ್ಥಳದಲ್ಲಿ ಅತಂತ್ರವಾಗಿರುವ ಬಗ್ಗೆ ಕಳೆದ ವಾರ ತನ್ನ ತಾಯಿ ಎಂ. ಚೆಕ್ಕಿ ಅವರಿಗೆ ಕರೆ ಮಾಡಿ ತಿಳಿಸಿದ್ದರು.

ಆತಂಕಗೊಂಡ ಚೆಕ್ಕಿ ಪುತ್ರಿಯನ್ನು ಮರಳಿ ಕರೆತರುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸ್ಪಂದಿಸಿರುವ ಜಿಲ್ಲಾಡಳಿತ ಪಾರ್ವತಿಯನ್ನು ಕರೆ ತರಲು ಅಗತ್ಯ ಕ್ರಮ ಕೈಗೊಂಡಿದೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಅಧಿಕಾರಿಗಳು ಸಂತ್ರಸ್ತೆಯೊಂದಿಗೆ ಸಂವಹನ ಸಾಧಿಸಿ, ಧೈರ್ಯ ತುಂಬಿದ್ದಾರೆ.

ವಂಚಿಸಿದ ಏಜೆಂಟ್‌
ಪತಿ ತೊರೆದು ಹೋದ ಹಿನ್ನೆಲೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯೊಂದಿಗೆ ಕರಡಿ ಗೋಡು ಗ್ರಾಮದ ಲೈನ್‌ ಮನೆಯಲ್ಲಿ ವಾಸವಿದ್ದ ಪಾರ್ವತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. 3 ವರ್ಷಗಳ ಹಿಂದೆ ಕೇರಳದ ತಲಚ್ಚೇರಿಯಗೆ ಮನೆ ಕೆಲಸಕ್ಕೆಂದು ತಾಯಿ ಚೆಕ್ಕಿಯೊಂದಿಗೆ ಇಬ್ಬರು ಮಕ್ಕಳನ್ನು ಬಿಟ್ಟು ತೆರಳಿದ್ದರು.

Advertisement

ಇತ್ತೀಚೆಗೆ ಮಹಿಳೆಯೊಬ್ಬಳ ಮೂಲಕ ಊಟಿಯ ಏಜೆಂಟ್‌ ಒಬ್ಬನ ಪರಿಚಯವಾಗಿದ್ದು, ಕುವೈಟ್‌ನಲ್ಲಿ ಮನೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಏಜೆಂಟ್‌ ನೀಡಿದ ಪಾಸ್‌ಪೋರ್ಟ್‌ ಮತ್ತು ವೀಸಾದ ಮೂಲಕ ಕುವೈಟ್‌ನ ಮನೆಯೊಂದನ್ನು ಸೇರಿದ ಪಾರ್ವತಿ 3 ತಿಂಗಳಿನಿಂದ ದುಡಿ ಯುತ್ತಿದ್ದರು. ಆದರೆ ವೀಸಾದ ಅವಧಿ ಮುಗಿಯುತ್ತಿದ್ದಂತೆ ಕೆಲಸ ಕಳೆದುಕೊಂಡ ಅವರು ಅತಂತ್ರರಾಗಿದ್ದಾರೆ.

ವಿಸಿಟಿಂಗ್‌ ವೀಸಾದ ಅವಧಿಯ ಕುರಿತು ತಿಳಿಸದೆ ವಂಚಿಸಿರುವ ಏಜೆಂಟ್‌ ಪಾರ್ವತಿಯನ್ನು ಕೆಲಸಕ್ಕೆ ಸೇರಿಸಿದ ಮನೆಯ ಮಾಲಕರಿಂದ ಹಣ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next