Advertisement

Online betting ವ್ಯಕ್ತಿಯನ್ನು ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು

04:40 PM Jun 03, 2023 | Team Udayavani |

ದುರ್ಗ್ : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಆನ್‌ಲೈನ್ ಬೆಟ್ಟಿಂಗ್ ಲಿಂಕ್ ಹೊಂದಿರುವ 41 ವರ್ಷದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಮೇ 31 ರಂದು ರಾತ್ರಿ ಅಪಹರಣಕ್ಕೊಳಗಾದ ಓಂ ಪ್ರಕಾಶ್ ಸಾಹು ಅವರ ಸಾವಿಗೆ ಸಂಬಂಧಿಸಿದಂತೆ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಶುಕ್ರವಾರ ರಾತ್ರಿ ಓಲ್ಡ್ ಭಿಲಾಯಿ ಪ್ರದೇಶದ ಅಕ್ರೋಲ್ದಿಹ್ ಕೊಳದಲ್ಲಿ ಶವ ಪತ್ತೆಯಾಗಿದೆ ಎಂದು ದುರ್ಗ್ ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಸಿನ್ಹಾ ತಿಳಿಸಿದ್ದಾರೆ.

“ಹತ್ಯೆಯ ಬಳಿಕ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಲಾಗಿತ್ತು, ಅದನ್ನು ಅವನ ಸ್ಕೂಟರ್‌ಗೆ ಹಗ್ಗದಿಂದ ಕಟ್ಟಲಾಗಿತ್ತು. ಜೂನ್ 1 ರಂದು, ಅವರು ಮೇ 31 ರಿಂದ ನಾಪತ್ತೆಯಾಗಿದ್ದಾರೆ ಮತ್ತು ಅಪರಿಚಿತ ಕರೆಗಾರರಿಂದ ಸುಲಿಗೆ ಕರೆ ಬಂದಿದೆ ಎಂದು ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದರು”ಎಂದು ಎಸ್ಪಿ ಹೇಳಿದರು.

“ಕರೆ ಮಾಡಿದ ಸಂಖ್ಯೆ ಸ್ವಿಚ್ ಆಫ್ ಆಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮೇ 31 ರ ರಾತ್ರಿ ಸಾಹುವನ್ನು ಕೊಲೆ ಮಾಡಲಾಗಿದೆ ಮತ್ತು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ರಾನ್ಸಮ್ ಕರೆ ಮಾಡಲಾಗಿದೆ. ಮೃತರು ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧ ಹೊಂದಿದ್ದರು ಮತ್ತು ಇದು ಕೊಲೆಗೆ ಕಾರಣವೆಂದು ತೋರುತ್ತದೆಹತ್ಯೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ”ಎಂದು ಸಿನ್ಹಾ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next