ಮುಂಬಯಿ: ಬಾಲಿವುಡ್ ನಟಿ ಶೃದ್ಧಾ ಕಪೂರ್ ವಿರುದ್ಧ ಟೆಕ್ಸ್‌ಟೈಲ್ ಉದ್ಯಮಿಯೊಬ್ಬರು ನ್ಯಾಯಾಲಯದಲ್ಲಿ ನಂಬಿಕೆ ದ್ರೋಹ ಮತ್ತು ವಂಚನೆಯ ದೂರನ್ನು ದಾಖಲಿಸಿದ್ದಾರೆ.
ಶೃದ್ದಾ ಸದ್ಯ ನಾಯಕಿಯಾಗಿ ಕಾಣಿಸಿಕೊಂಡಿರುವ ‘ಹಸೀನಾ ಪಾರ್ಕರ್’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದು, ಎಂ & ಎಂ ಡಿಸೈನ್ಸ್ ಕಂಪೆನಿಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು.
ನಿರ್ಮಾಪಕ ಸ್ವಿಸ್ ಎಂಟರ್‌ಟೈನ್ಮೆಂಟ್ ಮತ್ತು ಕಂಪೆನಿ ನಡುವಿನ ಒಪ್ಪಂದಂತೆ ಜಿತ್ರದ ಪ್ರಚಾರಕ್ಕೆ ತೆರಳುವ ವೇಳೆ ಶೃದ್ಧಾ ತೊಡುವ ಉಡುಪುಗಳ ಮೇಲೆ ಎಜಿಟಿಎಂ(ಆಜ್ ಮಿಸ್ಟ್ರಿ ಆ್ಯಂಡ್ ಥಿಯಾ ಮಿನ್ಹಾಸ್) ಲೇಬಲ್ ಹಾಕಿಕೊಳ್ಳಬೇಕಿತ್ತು. ಆದರೆ ಎಲ್ಲಿಯೂ ಲೇಬಲ್ ಹಾಕಿಕೊಂಡೇ ಇರಲಿಲ್ಲ. ಹೀಗಾಗಿ ಎಂ & ಎಂ ಡಿಸೈನ್ಸ್ ಶೃದ್ಧಾ ಮತ್ತು ನಿರ್ಮಾಪಕರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.
ವಂಚನೆ ಮತ್ತು ಕ್ರಿಮಿನಲ್ ಉಲ್ಲಂಘನೆ ಅಡಿ ದೂರು ದಾಖಲಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಶೃದ್ಧಾ ಲೇಬಲ್ ಹಾಕಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 26 ರಂದು ನಡೆಯಲಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಅಪಾ ಜೀವನಾಧಾರಿತ ಚಿತ್ರವಾಗಿರುವ ಹಸೀನಾ ಪಾರ್ಕರ್ ಸೆಪ್ಟೆಂಬರ್ 22 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.