ಹುಬ್ಬಳ್ಳಿ: ಕ್ಷುಲ್ಲಕ ವಿಚಾರವಾಗಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ರಾತ್ರಿ ಇಲ್ಲಿನ ಹಳೇಹುಬ್ಬಳ್ಳಿ ಸದರಸೋಫಾ ಕಟಗರ ಓಣಿ ಬಳಿಯ ಮುಖಗಲ್ಲಿಯಲ್ಲಿ ನಡೆದಿದೆ.
ಮಹಮ್ಮದ್ ಜಾಫರ್ ಇಮ್ತಿಯಾಜ್ ದಢೇಸೂರ (21 ವ) ಕೊಲೆಯಾಗಿದ ವ್ಯಕ್ತಿ. ಹಳೇಹುಬ್ಬಳ್ಳಿ ಕಸಾಯಿ ಮೊಹಲ್ಲಾದ ಶಾಬಾದ ಎಂಬಾತನೇ ಕೊಲೆ ಮಾಡಿದ್ದವನೆಂದು ಮೃತನ ಸಹೋದರ ಖ್ವಾಜಾಮೈನುದ್ದೀನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕ್ಷುಲ್ಲಕ ವಿಷಯವಾಗಿ ಇವರಿಬ್ಬರ ನಡುವೆ ಎರಡು ದಿನಗಳ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಇದೇ ದ್ವೇಷ ಸಾಧಿಸುತ್ತಿದ್ದ ಶಾಬಾದ್ ಶನಿವಾರ ರಾತ್ರಿ ತನ್ನ ಮನೆ ಬಳಿ ಬಂದಿದ್ದ ಮಹಮ್ಮದ್ ಜೊತೆ ಮತ್ತೆ ವಾಗ್ವಾದ ಮಾಡಿ ಚಾಕುವಿನಿಂದ ಮೊಣಕಾಲು ಬಳಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಮ್ಮದ್ ನನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಪ್ರಕರಣಕ್ಕೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಕಸಾಯಿ ಮೊಹಲ್ಲಾದ ಶಾಬಾದ್, ಅಫ್ತಾಬ್ ಮತ್ತು ನಾರಾಯಣ ಸೋಫಾದ ಗಫಾರಸಾಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.