Advertisement

ಅಪ್ರಾ​ಪ್ತೆಯೊಂದಿಗೆ ಅನ್ಯಧರ್ಮದ ಯುವಕ ಅನುಚಿತ ವರ್ತನೆ : ಆರೋಪಿ ಪೊಲೀಸ್‌ ವಶಕ್ಕೆ

06:06 PM May 09, 2022 | Team Udayavani |

ಪುತ್ತೂರು : ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಕಟ್ಟಡವೊಂದರಲ್ಲಿ ಅಪ್ರಾ​ಪ್ತೆಯೊಂದಿಗೆ ಅನ್ಯಧರ್ಮದ ಯುವಕನೊರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಸೋಮವಾರ ನಡೆದಿದ್ದು ಪೊಲೀಸರು ಆರೋಪಿ ನೌಫಲ್‌ ಸರಳಿಕಟ್ಟೆ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಬಸ್‌ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದ ಗದಗ ಮೂಲದ ಮಹಿಳೆಯ ಅಪ್ರಾ​ಪ್ತೆ ಪುತ್ರಿಗೆ ಆರೋಪಿಯು ಹಣದ ಆಮಿಷವೊಡ್ಡಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದಿದ್ದು ತತ್‌ಕ್ಷಣ ಆರೋಪಿಯನ್ನು ವಿಚಾರಿಸಿದಾಗ ಆತ ಗದರಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ಸ್ನೇಹಿತರ ಜತೆ ಪ್ರವಾಸ ತೆರಳಿ ಮರಳಿದ ಯುವಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ  

ಮಹಿಳೆ ಪೊಲೀಸರ ಗಮನಕ್ಕೆ ತಂದಿದ್ದು ಈ ವೇಳೆ ಹಿಂದೂ ಸಂಘಟನೆಯ ಮುಖಂಡರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next