ಕುಂದಾಪುರ: ಕಾಳಾವಾರ ಸಮೀಪ ಕಳೆದ ಎ. 29 ರಂದು ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ವೃದ್ಧೆಯೊಬ್ಬರ ಚಿನ್ನದ ಸರ ಕದ್ದು ಪರಾರಿಯಾಗಿದ್ದವನನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಿಲಕ್ ಕುಮಾರ್ ಬಂಧಿತ ಆರೋಪಿ. ಈತನಿಂದ ಕದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ಎ.29 ರಂದು ಪದ್ದಮ್ಮ ಶೆಟ್ಟಿ (72) ಎಂಬುವರು ಕಾಳಾವರ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ 75 ಸಾವಿರ ರೂ. ಮೌಲ್ಯದ 2 ಪವನ್ ತೂಕದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ತಿಲಕ್ ಎಗರಿಸಿ, ಪರಾರಿಯಾಗಿದ್ದ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಉಳ್ಳಾಲ : ಮಳೆಗೆ ಕುಸಿದು ಬಿದ್ದ ಶಾಲೆಯ ಹಳೆ ಕಟ್ಟಡದ ಮೇಲ್ಛಾವಣಿ, ತಪ್ಪಿದ ಭಾರಿ ಅನಾಹುತ
ಎಸ್ಪಿ ವಿಷ್ಣುವರ್ಧನ್ ನಿರ್ದೇಶನದಲ್ಲಿ ಎಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಕೆ.ಗೋಪಿಕೃಷ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಕುಂದಾಪುರ ಗ್ರಾಮಾಂತರ ಠಾಣಾ ಎಸ್‌ಐಗಳಾದ ನಿರಂಜನ್ ಗೌಡ, ಸುಹಾಸ್, ಅಪರಾಧ ವಿಭಾಗದ ರಾಜು ಬಿ., ನಾಗೇಶ್, ಅನಿಲ್ ಕುಮಾರ್ ಬಿ.ಎಸ್., ಚಿದಾನಂದ ಹಾಗೂ ತಾಂತ್ರಿಕ ವಿಭಾಗದ ದಿನೇಶ್ ಮತ್ತು ಶಿವಾನಂದ ಅವರನ್ನೊಳಗೊಂಡ ತಂಡ ಬಂಧಿಸುವಲ್ಲಿ ಯಶ್ವಸಿಯಾಗಿದೆ.