ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಪಲ್ಟಿಯಾದ ಘಟನೆ ಬುಧವಾರ ಐವರ್ನಾಡು ಸಮೀಪದ ಬೇಂಗಮಲೆಯಲ್ಲಿ ಸಂಭವಿಸಿದೆ.
Advertisement
ಸುಳ್ಯ-ಬೆಳ್ಳಾರೆ ರಸ್ತೆಯಲ್ಲಿ ಐವರ್ನಾಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ವಾಹನ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿದೆ.
ಇದನ್ನೂ ಓದಿ:ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ
ಘಟನೆಯಲ್ಲಿ ವಾಹನ ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.