Advertisement

ಮೂಡುಬಿದಿರೆ: ಅಕ್ರಮ ಮರ ಸಾಗಾಟ: ಆರೋಪಿ ಸಹಿತ ವಾಹನ ವಶ

04:28 PM Aug 14, 2022 | Team Udayavani |

ಮೂಡುಬಿದಿರೆ: ಇಲ್ಲಿನ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ವಶಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಆಗಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಸ್ವಾತಂತ್ರ್ಯ ದಿನಕ್ಕೆ ಒಂದು ದಿನ ಮೊದಲು ಪಂಜಾಬ್ ನಲ್ಲಿ ನಾಲ್ವರು ಉಗ್ರರ ಬಂಧನ

ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಯುತ್ತಿದೆ.ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಪತ್‌ ಪಟೇಲ್‌, ಉಪವಲಯ ಅರಣ್ಯಾಧಿಕಾರಿಗಳಾದ ಕಾಂತರಾಜ್‌, ಪ್ರಕಾಶ್‌ ಶೆಟ್ಟಿ, ಸಂತೋಷ್‌, ವಿಕಾಸ್‌ ,ವಾಹನ ಚಾಲಕ ಜಯಪ್ರಕಾಶ ಭಾಗವಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next