Advertisement

ಮಂಗಳೂರು: 3.375 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

07:20 PM May 15, 2022 | Team Udayavani |

ಮಂಗಳೂರು: ಮಂಗಳೂರು ನಗರದ ಸೆಂಟ್ರಲ್‌ ರೈಲ್ವೇ ನಿಲ್ದಾಣ ಬಳಿ 3. 375 ಕೆ.ಜಿ. ಗಾಂಜಾ ಸಹಿತ ಇಬ್ಬರನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಖಚಿತ ಮಾಹಿತಿ ಮೇರೆಗೆ ಮೇ 5ರಂದು ರಾತ್ರಿ 9 ಗಂಟೆಯ ಸುಮಾರಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್‌ ಉಪನಿರೀಕ್ಷಕ ಶೀತಲ್‌ ಅಲಗೂರ್‌ ಅವರ ನೇತೃತ್ವದ ತಂಡ ಸೆಂಟ್ರಲ್‌ ರೈಲ್ವೇ ಕಾಲನಿಯ 2ನೇ ಗೇಟ್‌ ಬಳಿ ಕೇರಳದ ಮಹಮ್ಮದ್‌ ಮುಸ್ತಾಫ‌ ಮತ್ತು ಮಹಮ್ಮದ್‌ ಜಜಿಲ್‌ನನ್ನು ಬಂಧಿಸಿದೆ.

ಇದನ್ನೂ ಓದಿ:ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಪತ್ನಿಗೆ ರಾಜ್ಯಸಭೆ ಟಿಕೆಟ್‌?

ಆರೋಪಿಗಳಿಂದ 3.375 ಕೆ.ಜಿ. ಗಾಂಜಾ, 2 ಮೊಬೈಲ್‌ ಹಾಗೂ 2,500 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next