ಕಾರ್ಕಳ: ಇಲ್ಲಿನ ಕಸಬಾದ ಕಾಬೆಟ್ಟು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಟೆಕ್ ಲ್ಯಾಬ್ ಕಟ್ಟಡದ ಕಿಟಕಿ ಗಾಜುಗಳನ್ನು ಒಡೆದ ಕಿಡಿಗೇಡಿಗಳು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ಮೇ 4ರಂದು ರಾತ್ರಿ ನಡೆದಿದೆ
ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್ ಲ್ಯಾಬ್ ಕಟ್ಟಡದ ಒಳಗಿನ ಸಾಮಗ್ರಿಗಳ ಅನುಷ್ಠಾನ ಕಾರ್ಯ ನಡೆದಿದ್ದು, ಕಟ್ಟಡದ 12 ಕಿಟಕಿ ಗಾಜುಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಸುಮಾರು 1 ಲಕ್ಷ ರೂ ನಷ್ಟವುಂಟಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಬಾರಿ ಘಟನೆ
ಕಾರ್ಕಳ ಉತ್ಸವದ ಸಂದರ್ಭ ಈ ಹಿಂದೆ ಕೂಡ ಇದೇ ಕಟ್ಟಡದ ಕಿಟಕಿ ಒಡೆದು ಹಾನಿಗೊಳಿಸಲಾಗಿತ್ತು. ಅದಾದ ಬಳಿಕ ದುರಸ್ತಿ ಕಾರ್ಯ ನಡೆಸಲಾಗಿತ್ತು. ಇದೀಗ ಎರಡನೇ ಬಾರಿ ಘಟನೆ ನಡೆದಿದೆ.