Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

12:53 AM Jul 02, 2022 | Team Udayavani |

ಗುರುಪುರ: ಕೆರೆಗೆ ಬಿದ್ದ ವ್ಯಕ್ತಿ ಗಂಭೀರ
ಕೈಕಂಬ: ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಸಮೀಪವಿರುವ ಕೆರೆ(ಕುಳ) ಯಲ್ಲಿ ಶುಕ್ರವಾರ ಸಂಜೆ ಮೀನು ಹಿಡಿಯಲು ಹೋದ ಗುರುಪುರ ಕೊಟ್ಟಾರಿ ಗುಡ್ಡೆಯ ಪ್ರವೀಣ್‌ (45) ಅವರು ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

Advertisement

ಗುರುಪುರ ಕೊಟ್ಟಾರಿ ಗುಡ್ಡೆಯ ಗ್ರೇಶನ್‌ ಅವರು ಪ್ರವೀಣ್‌ ಅವರನ್ನು ಗುರುಪುರ ಶ್ರೀ ಸದಾಶಿವ ದೇವಸ್ಥಾನದ ಸಮೀಪ ಇರುವ ಕೆರೆಯಲ್ಲಿ ಮೀನು ಹಿಡಿಯುಲು ಕರೆದುಕೊಂಡು ಹೋಗಿ ದ್ದರು. ಕೆರೆಯಲ್ಲಿ ಬಲೆಯನ್ನು ಹಾಕಿ ವಾಪಸಾಗುವ ವೇಳೆ ಪ್ರವೀಣ್‌ ಬಲೆಗೆ ಸಿಲುಕಿಕೊಂಡ ಕಾರಣ ಅಲ್ಲೇ ಮುಳುಗಿದ್ದಾರೆ. ಸುಮಾರು 9 ಗಂಟೆಯ ವೇಳೆಗೆ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವಿ ವಾಹಿತರಾಗಿದ್ದ ಅವರು ಕೂಲಿ ಕಾರ್ಮಿಕರಾಗಿದ್ದರು.

ಢಿಕ್ಕಿ: ಕಾರ್ಮಿಕ ಸಾವು
ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಕಾರು ಢಿಕ್ಕಿಯಾಗಿ ನಗರದಲ್ಲಿ ಕೂಲಿ ಕಾರ್ಮಿಕರಾಗಿದ್ದ, ಮೂಲತಃ ಬಾಗಲಕೋಟೆ ನಿವಾಸಿ ಮಂಜುನಾಥ (42) ಮೃತಪಟ್ಟಿದ್ದಾರೆ.

ಅವರು ಬುಧವಾರ ತಡರಾತ್ರಿ ರಾ.ಹೆ. 66ರ ಕೊಟ್ಟಾರಚೌಕಿ ಬಸ್‌ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದಾಗ ಕೂಳೂರು ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿತ್ತು. ಸಂಚಾರ ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ
ಸಿದ್ದಾಪುರ: ಶಂಕರ ನಾರಾಯಣ ಕುಳ್ಳುಂಜೆ ಶಾಲೆಯ ಬಳಿ ನಿವಾಸಿ ಬಾಬಣ್ಣ ಕುಲಾಲ್‌ ಅವರ ಪುತ್ರಿ, ಶಂಕರ ನಾರಾಯಣ ಸರಕಾರಿ ಜೂನಿಯರ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಾನಸಾ ಕುಲಾಲ್‌ (17) ಅವರು ಪ್ರಥಮ ಪಿಯುಸಿಯ ಮರು ಪರೀಕ್ಷೆಯಲ್ಲೂ ಅನುತ್ತೀರ್ಣರಾಗುವ ಭಯದಿಂದ ಹೆದರಿ ಗುರುವಾರ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಷಮಿಸಿಬಿಡಿ ಎಂದು ಡೆತ್‌ನೋಟ್‌ ಬರೆದಿಟ್ಟು ಮಾನಸಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಕಾಲು ಜಾರಿ ಬಿದ್ದು ಸಾವು
ಉಡುಪಿ: ತೆಂಗಿನ ಕಾಯಿ ಹೆಕ್ಕಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಣಿಪಾಲದ ನಿವಾಸಿ ರಮೇಶ್‌ (62) ಅವರು ಮನೆಯ ಎದುರುಗಡೆ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲು ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ರಮೇಶ್‌ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ: ಮತ್ತೆ ಮೂವರ ಬಂಧನ
ಕುಂಬಳೆ: ಪುತ್ತಿಗೆಯ ಮುಗು ರೋಡಿನ ಅಬೂಬಕ್ಕರ್‌ ಸಿದ್ದಿಕ್‌ ಹತ್ಯೆಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ಆರೋಪಿಗಳಾದ ಮಂಜೇಶ್ವರ ಉದ್ಯಾವರದ ರಿಯಾಜ್‌ ಹಸನ್‌ (33), ಉಪ್ಪಳ ಭಗವತೀ ಕೇÒತ್ರ ರಸ್ತೆಯ ರಜಾಕ್‌ (46) ಮತ್ತು ಕುಂಜತ್ತೂರು ಅಬೂಬಕ್ಕರ್‌ ಸಿದ್ದಿಕ್‌ (33) ನನ್ನು ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್‌ ನಾಯರ್‌ ನೇತೃತ್ವದ ತಂಡ ಬಂಧಿಸಿದೆ.

ಇದರಿಂದ ಬಂಧನಕ್ಕೊಳಗಾದ ಆರೋಪಿಗಳ ಸಂಖ್ಯೆ 5ಕ್ಕೆ ಏರಿದೆ. ಈಗ ಬಂಧಿತ ಆರೋಪಿಗಳು ಸಿದ್ದಿಕ್‌ ಅವರ ಕೊಲೆಯಲ್ಲಿ ನೇರವಾಗಿ ಶಾಮೀಲಾಗದಿದ್ದರೂ, ಕೊಟೇಶನ್‌ ನೀಡಿದವರಾಗಿದ್ದರು. ಇತರ ಆರೋಪಿಗಳು ಕರ್ನಾಟಕ, ಗೋವಾ ತಮಿಳುನಾಡು ಮೊದಲಾದೆಡೆ ಪರಾರಿಯಾಗಿರುವುದಾಗಿ ಶಂಕಿಸಲಾಗಿದೆ. ಕೊಲೆ ನಡೆದ ದಿನದಂದೇ ಓರ್ವ ಆರೋಪಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಿದ್ದಾಗಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next