ಕಾರ್ಕಳ: ಅಂಗನವಾಡಿ ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ಅಂಗನವಾಡಿ ಕಾರ್ಯಕರ್ತೆಯೊಬ್ಬ ರಿಂದ ಹಣ ಪಡೆದು ವಂಚಿಸಿದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡ್ಕೂರು ಗ್ರಾಮದ ಸಚ್ಚರಿ ಪೇಟೆ ನಿವಾಸಿ ಶಶಿಕಲಾ ಅರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಬೆಂಗಳೂರಿನಲ್ಲಿ ವೇಣುಗೋಪಾಲ ಎಂಬವರು ಅಂಗನವಾಡಿಯ ಮೇಲ್ವಿ ಚಾರಕಿ ಹು¨ªೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿದ್ದರು. ಅದಕ್ಕೆಂದು ಹಂತಹಂತವಾಗಿ ಸುಮಾರು 5 ಲಕ್ಷ ರೂ. ಪಡೆದು ಬಳಿಕ ವಂಚಿಸಿದ್ದಾರೆ.
ಆರಂಭದಲ್ಲಿ ಹುದ್ದೆ ಕೊಡಿಸಲು 2 ಲಕ್ಷ ಹಣವನ್ನು ಕೇಳಿದ್ದು, ಶಶಿಕಲಾ ಅರು ಸಚ್ಚರೀಪೇಟೆ ಕೆನರಾ ಬ್ಯಾಂಕ್ ತನ್ನ ಖಾತೆಯಿಂದ ಮೊದಲ ಬಾರಿಗೆ 80 ಸಾವಿರ ರೂ ಅನ್ನು ವೇಣು ಗೋಪಾಲನ ಅಣ್ಣ ವಿಶ್ವನಾಥ ಅವರ ಬ್ಯಾಂಕ್ ಖಾತೆಗೆ ಹಣ ಕಳುಹಿಸಿಕೊಟ್ಟಿದ್ದರು. ನಂತರ 1 ಲಕ್ಷ ರೂ. 25 ಸಾವಿರ ರೂ., ರೂ. 55 ಸಾವಿರ, 10 ಸಾವಿರ, 10 ಸಾವಿರ ಹೀಗೆ ಹಂತ-ಹಂತವಾಗಿ ಒಟ್ಟು 2.80 ಲಕ್ಷ ರೂ. ನಗದನ್ನು 5 ಬಾರಿ ಕಳುಹಿಸಿಕೊಟ್ಟಿದ್ದರು. 2021 ಡಿ. 23ರಂದು ವೇಣು ಗೋಪಾಲನು ಶಶಿಕಲಾರವರ ಮನೆಗೆ ಬಂದು ರಸ್ತೆ ಅಪಘಾತವಾಗಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆ ಬಗ್ಗೆ ಸಾಲ ರೂಪದಲ್ಲಿ ಹಣ ಕೇಳಿದ್ದು ಮತ್ತೆ 2.20 ಲಕ್ಷ ರೂ ಅನ್ನು ಮಹಿಳೆ ನೀಡಿದ್ದರು. ಹೀಗೆ ಸುಮಾರು 5 ಲಕ್ಷ ರೂ. ಹಣ ಪಡೆದ ಬಳಿಕ ಮೊಬೈಲ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದು, ಹಣ ವಾಪಸು ನೀಡದೆ ವಂಚಿಸಿದ ಬಗ್ಗೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.