ಮಂಗಳೂರು: ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐ ಫೋನ್ ಬುಕ್ ಮಾಡಿದವರೊಬ್ಬರು 66,000 ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
Advertisement
ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಮಾಹಿತಿ ನೋಡಿ ಮೆಸೇಜ್ ಮಾಡಿದ್ದರು. ಅವರಿಗೆ ಗೂಗಲ್ ಪೇ ಮತ್ತು ವಾಟ್ಸ್ ಆ್ಯಪ್ ಸಂಖ್ಯೆ ಬಂದಿತ್ತು.
ಅವರು ಐಫೋನ್ 13 ಪ್ರೊ ಮ್ಯಾಕ್ಸ್ ಬುಕ್ ಮಾಡಿ ಮಾ. 13ರಿಂದ 17ರ ನಡುವೆ ಅವರ ಖಾತೆಯಿಂದ ಹಂತ ಹಂತವಾಗಿ 66,000 ರೂ. ವರ್ಗಾವಣೆ ಮಾಡಿದ್ದರು. ಆದರೆ ಅವರಿಗೆ ಬುಕ್ ಮಾಡಿದ ಮೊಬೈಲ್ ಆಗಲಿ, ಪಾವತಿಸಿದ ಹಣವಾಗಲಿ ಬಂದಿಲ್ಲ. ಈ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.