ವಿಟ್ಲ: ಕಾರು ಚಾಲಕನ ಆಟಾಟೋಪದಿಂದ ಇಬ್ಬರು ಮಹಿಳೆಯರು ಕಕ್ಕಾಬಿಕ್ಕಿಯಾಗಿ, ಭಯದಿಂದ ಕಂಗಾಲಾಗಿ ಬೊಬ್ಬೆ ಹೊಡೆದಾಗ ಗಮನಿಸಿದ ನಾಗರಿಕರು ಕಾರನ್ನು ಅಡ್ಡಹಾಕಿ, ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ಸಂಭವಿಸಿದೆ.
ಕಾರು ಚಾಲಕ, ಕಾಡುಮಠ ಕಾಲನಿ ನಿವಾಸಿ ಸಾಗರ್ (26)ನನ್ನು ಹಾಗೂ ಕಾರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.ಮಂಗಳೂರು ತೊಕ್ಕೊಟ್ಟು ಸಮೀಪ ಪಿಲಾರಿನ ಮಹಿಳೆಯರಿಬ್ಬರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗಲು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಹೊರಟಿದ್ದರು.
ಆದರೆ ನಿಗದಿತ ಸ್ಥಳಕ್ಕೆ ತಲುಪಬೇಕಾಗಿದ್ದ ಕಾರು ಚಾಲಕ ಬದಲಿ ರಸ್ತೆಗಳ ಮೂಲಕ ವೇಗದಲ್ಲಿ ಒಟ್ಟಾರೆಯಾಗಿ ಚಲಾಯಿಸಿದ್ದು, ಆತಂಕಿತರಾದ ಮಹಿಳೆಯರು ಬೊಬ್ಬೆ ಹೊಡೆದಿದ್ದಾರೆ.
ಕಾರಿನಿಂದ ಹೊರಗೆ ತಲೆ ಹಾಕಿ ಸಹಾಯಕ್ಕಾಗಿ ಮಹಿಳೆಯರು ಮೊರೆ ಇಡುವುದನ್ನು ಕಂಡ ಸ್ಥಳೀಯರು ಇದು ಅಪಹರಣ ಇರಬಹುದು ಎಂದು ಶಂಕಿಸಿ ಕಾರನ್ನು ಬೆನ್ನಟ್ಟಿ ಕಾಡುಮಠದಲ್ಲಿ ಕಾರು ತಡೆಯುವಲ್ಲಿ ಯಶಸ್ವಿಯಾದರು.
Related Articles