Advertisement

ಅಧಿಕಾರಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು

01:10 AM Oct 15, 2022 | Team Udayavani |

ಪುಂಜಾಲಕಟ್ಟೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಒಳಬೈಲುವಿನಲ್ಲಿ ಸಂಭವಿಸಿದೆ.

Advertisement

ಇಲ್ಲಿನ ನಿವಾಸಿ, ಸರಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡೀಸ್‌ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 25 ಗ್ರಾಂ ಚಿನ್ನವನ್ನು ಕಳವುಗೈಯಲಾಗಿದೆ. ಸಿಲ್ವಿಯಾ ಅವರು ಮಗಳ ಮನೆಗೆ ತೆರಳಿದ್ದು, ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಖಚಿತಪಡಿಸಿಕೊಂಡಿದ್ದ ಕಳ್ಳರು ಕಳ್ಳತನ ನಡೆಸಿದ್ದಾರೆ.

ಕಬ್ಬಿಣದ ಕಿಟಕಿಯನ್ನು ಕಟ್ಟರ್‌ ಸಹಾಯದಿಂದ ಕತ್ತರಿಸಿ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯೊಳಗೆ ಜಾಲಾಡಿ ಕಪಾಟಿನಲ್ಲಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಎರಡು ಉಂಗುರ, ಎರಡು ಕಿವಿಯೋಲೆಯನ್ನು ಕಳವು ಮಾಡಿ¨ªಾರೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಎಸ್‌ಐ ಸುತೇಶ್‌ ಭೇಟಿ ನೀಡಿದ್ದಾ ರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾ ರೆ.

Advertisement

Udayavani is now on Telegram. Click here to join our channel and stay updated with the latest news.

Next