Advertisement

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

12:36 AM Sep 28, 2022 | Team Udayavani |

ಸುಳ್ಯ: ವಾಟ್ಸ್‌ ಆ್ಯಪ್‌ ಗ್ರೂಪ್‌ವೊಂದರಲ್ಲಿ ಪರಿಚಯಗೊಂಡ ಯುವಕ ಅಪ್ರಾಪ್ತ ವಯಸ್ಕ ಯುವತಿಯನ್ನು ಸ್ನೇಹಿತನ ರೂಂಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ತೀರ್ಥಪ್ರಸಾದ್‌ (25) ವಿರುದ್ಧ ದೂರು ದಾಖಲಾಗಿದೆ.

ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ 4 ತಿಂಗಳ ಹಿಂದೆ ಉಬರಡ್ಕದ ತೀರ್ಥಪ್ರಸಾದ್‌ ಪರಿಚಯವಾಗಿದ್ದು, ಬಳಿಕ ಕರೆ ಮಾಡಿ ಪರಸ್ಪರ ಮಾತನಾಡಿಕೊಂಡಿದ್ದರು.

ಜೂ. 30ರಂದು ಮಧ್ಯಾಹ್ನ ಆರೋಪಿ ಆಕೆಯನ್ನು ಸುಳ್ಯಕ್ಕೆ ಮಾತನಾಡಲೆಂದು ಕರೆಸಿಕೊಂಡು ಬಳಿಕ ಆಕೆಯನ್ನು ತನ್ನ ಬೈಕ್‌ನಲ್ಲಿ ಸುಳ್ಯ ಕಸಬಾ ಗ್ರಾಮದ ಜೂನಿಯರ್‌ ಕಾಲೇಜು ಬಳಿಯ ಆತನ ಸ್ನೇಹಿತನ ರೂಮ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಗೆ ಕಳೆದ ಎರಡು ತಿಂಗಳಿನಿಂದ ಆಗಾಗ್ಗೆ ಹೊಟ್ಟೆ ನೋವು ಆಗುತ್ತಿದ್ದುದರಿಂದ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷಿಸಿದ ವೇಳೆ ಆಕೆ ಗರ್ಭವತಿಯಾಗಿರುವುದು ಗೊತ್ತಾಗಿದೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next