Advertisement

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

12:42 AM Sep 25, 2022 | Team Udayavani |

ಬೆಳ್ತಂಗಡಿ: ಚಿಕ್ಕಮಗಳೂರಿನಲ್ಲಿ ಸರಕಾರಿ ಬಸ್‌ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ತುಂಬೆತಡ್ಕ ನಿವಾಸಿ ಚೆನ್ನಕೇಶವ (28) ಅವರು ಮೃತಪಟ್ಟ ಘಟನೆ ಸೆ. 22ರಂದು ಸಂಭವಿಸಿದೆ.

Advertisement

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕ್ಷ ಕಿರಣದ ಟೆಕ್ನಿಶಿಯನ್‌ ಆಗಿದ್ದ ಚೆನ್ನಕೇಶವ ಅವರು ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದು, ಅಜ್ಜಿ ಮನೆಯಾದ ಚಿಕ್ಕಮಗಳೂರಿಗೆ ಹೋಗಿ ದ್ದರು. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಒಂದಕ್ಕೆ ಹೋಗುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ ಹೊಡೆದಿದೆ.

ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next