Advertisement

ವೇಣೂರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

12:24 AM Sep 24, 2022 | Team Udayavani |

ವೇಣೂರು: ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆಯಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ ಸೆ. 23ರಂದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುಂಕದಕಟ್ಟೆ ನಿವಾಸಿ ಫೌಜಿಯಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಫೌಜಿಯಾ ಅವರು ರಾತ್ರಿ ಹತ್ತಿರದ ಸಹೋದರನ ಮನೆಗೆ ಹೋಗಿದ್ದು, ಬೆಳಗ್ಗೆ ಮನೆಗೆ ಬಂದು ಗಮನಿಸಿದಾಗ ಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ.

ಕಳ್ಳರು ಬೀಗ ಮುರಿದು ಮನೆಯ ಬೆಡ್‌ ರೂಂನಲ್ಲಿದ್ದ ಗೋದ್ರೆಜ್‌ ಕಪಾಟನ್ನು ತೆರೆದು ಅದರಲ್ಲಿದ್ದ ಸುಮಾರು ಎರಡೂವರೆ ಪವನ್‌ ತೂಕದ 2 ಚಿನ್ನದ ಸರ, 1 ಪವನ್‌ ತೂಕದ 2 ಜತೆ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್‌ ತೂಕದ 2 ಬ್ರಾಸ್‌ಲೆಟ್‌ ಸೇರಿದಂತೆ 25 ಸಾವಿರ ರೂ. ನಗದನ್ನು ದೋಚಿದ್ದಾರೆ. ನಗ-ನಗದು ಸೇರಿದಂತೆ ಕಳವಾದ ಒಟ್ಟು ಸೊತ್ತುಗಳ ಮೌಲ್ಯ 2,97,000 ರೂ. ಎಂದು ಅಂದಾಜಿಸಲಾಗಿದೆ.

ವೇಣೂರು ಠಾಣೆಯ ಉಪನಿರೀಕ್ಷಕಿ ಸೌಮ್ಯಾ ಜೆ. ಹಾಗೂ ಸಿಬಂದಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next