Advertisement

ಮಂಗಳೂರು: ಎಂಡಿಎಂಎ ಡ್ರಗ್ಸ್‌ ಸಾಗಾಟ, ಮಾರಾಟ: ವಿದೇಶಿ ಪ್ರಜೆ ಬಂಧನ

12:44 AM Sep 22, 2022 | Team Udayavani |

ಮಂಗಳೂರು: ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಾಗಾಟ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸೆನ್‌ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.

Advertisement

ಮೂಲತಃ ರಿಪಬ್ಲಿಕ್‌ ಆಫ್ ಸೌತ್‌ ಸೂಡನ್‌ನ ನಿವಾಸಿ, ಹಾಲಿ ಬೆಂಗಳೂರಿನ ಗುಂಜುರು ಪಾಳ್ಯದಲ್ಲಿ ವಾಸವಿರುವ ಲೂಯಲ್‌ ಡೇನಿಯಲ್‌ ಜಸ್ಟೀನ್‌ ಬೌಲೋ ಆಲಿಯಾಸ್‌ ಡ್ಯಾನಿ (25) ಬಂಧಿತ ಆರೋಪಿ.

2022ರ ಜೂ. 15ರಂದು ಸಿಸಿಬಿ ಪೊಲೀಸರು ಮಂಗಳೂರಿನ ಪಡೀಲ್‌ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿ 125 ಗ್ರಾಂ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು. ತನಿಖೆ ಮುಂದುವರಿಸಿದ ಪೊಲೀಸರು ಡ್ಯಾನಿಯನ್ನು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next