Advertisement
ಪ್ರಕರಣದ ವಿವರ1997ರ ನ. 11ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಬಾಸಿಡರ್ ಕಾರು ಕಳವು ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಯಾಗಿರಲಿಲ್ಲ. ಅನಂತರ ಮೈಸೂರಿನಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ಅಲ್ಲಿನ ಪೊಲೀಸರು ಅಸ್ಲಾಂನನ್ನು ಬಂಧಿಸಿದ್ದರು. ಆಗ ಮಂಗಳೂರಿನಲ್ಲಿ ಕಾರು ಕಳವು ಮಾಡಿರುವ ಪ್ರಕರಣವೂ ಬಯಲಾಗಿತ್ತು. ಆರೋಪಿ ಮೈಸೂರು ಜೈಲಿನಲ್ಲಿದ್ದ.
ಆರೋಪಿ ಪೊಲೀಸರಿಗೆ ಸುಳ್ಳು ವಿಳಾಸಗಳನ್ನೇ ನೀಡಿದ್ದ. ಪೀಣ್ಯ ಬೆಂಗಳೂರಿನ ನಿವಾಸಿಯೆಂದು ತೋರಿಸಿದ್ದ. ಈತನ ಕುಟುಂಬದ ಬಗ್ಗೆ ನೀಡಿದ ಮಾಹಿತಿಯೂ ಸುಳ್ಳಾಗಿತ್ತು. ಈತ ಪತ್ನಿ, ಅತ್ತೆ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ.
Related Articles
Advertisement
6 ಅಂಬಾಸಿಡರ್ ಕಾರು ಕದ್ದಿದ್ದ ಅಸ್ಲಾಂ ಪಾಷಾ ಮಂಗಳೂರಿನ ಕೊಡಿಯಾಲಬೈಲ್, ಎಮ್ಮೆಕೆರೆ ಮತ್ತು ಅತ್ತಾವರ ಬಾಬುಗುಡ್ಡೆಯಲ್ಲಿ ಒಟ್ಟು ಮೂರು ಅಂಬಾಸಿಡರ್ ಕಾರುಗಳನ್ನು ಕದ್ದಿದ್ದ. ಅಲ್ಲದೆ ಬೆಂಗಳೂರು ಜೆಪಿ ನಗರ, ಮೈಸೂರು ವಿಶ್ವೇಶ್ವರನಗರ, ಕೆ.ಆರ್.ಆಸ್ಪತ್ರೆ ಬಳಿ ಕೂಡ ತಲಾ ಒಂದು ಅಂಬಾಸಿಡರ್ ಕಾರುಗಳನ್ನು ಕಳವು ಮಾಡಿದ್ದ. ಮೈಸೂರು ಕುಕ್ರಳ್ಳಿ ಕೆರೆ, ವಿಜಯನಗರ, ಬೆಂಗಳೂರು ಮೊದಲಾದೆಡೆ 8ಕ್ಕೂ ಅಧಿಕ ಬೈಕ್‌ಗಳನ್ನು ಕಳವು ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.