Advertisement

ಪುತೂರಿನಲ್ಲಿ ನಡೆದ ದುರ್ಘ‌ಟನೆ: ಸಮುಚ್ಚಯದಿಂದ ಬಿದ್ದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವು

11:53 PM Aug 05, 2022 | Team Udayavani |

ಪುತ್ತೂರು: ಶುಕ್ರವಾರ ಸಂಜೆ ಬೊಳುವಾರು ವಸತಿ ಸಮುಚ್ಚಯವೊಂದರ ಬಿ ಬ್ಲಾಕ್‌ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಪ್ರೌಢಶಾಲೆಯ 9ನೇ ತರಗತಿಯ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Advertisement

ಪದ್ಮುಂಜ ಕೆನರ ಬ್ಯಾಂಕ್‌ ನಿವೃತ್ತ ಮ್ಯಾನೇಜರ್‌, ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ ರೈ ಅವರ ಪುತ್ರ ಸುದಾನ ವಸತಿಯುತ ಶಾಲೆಯ ಸುಶಾನ್‌ ರೈ ಮೃತಪಟ್ಟವರು.

ಸುಶಾನ್‌ ರೈ ಅವರು ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಯಕ್ಕೆ ತೆರಳಿದ್ದರು. ಕೆಲ ಸಮಯದ ವೇಳೆ ಅವರು ಸಮುಚ್ಚಯದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ತಂದೆ ಮನೋಹರ್‌ ರೈ, ತಾಯಿ ಸುಧಾ ಎಂ. ರೈ ಮತ್ತು ಸಹೋದರ ಸೋಹನ್‌ ರೈ ಅವರನ್ನು ಅಗಲಿದ್ದಾರೆ.

ವಸತಿ ಸಮುಚ್ಚಯದ ಕಟ್ಟಡದಲ್ಲಿ ಶಾಲಾ ಬ್ಯಾಗ್‌ ಪತ್ತೆ
ಸುಶಾನ್‌ ರೈ ಅವರು ಶಾಲೆಯಿಂದ ನೇರ ಮನೆಗೆ ಹೋಗದೆ ವಸತಿ ಸಮುಚ್ಚಯಕ್ಕೆ ಸಂಜೆ 4.20ರ ಸುಮಾರಿಗೆ ಒಳಗೆ ಬಂದಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷದಲ್ಲಿ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆತನ ಶಾಲಾ ಬ್ಯಾಗ್‌ ಮಾತ್ರ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next