Advertisement

ದ.ಕ.: ಇತ್ತೀಚಿನ ವರ್ಷಗಳಲ್ಲಿ ನಡೆದ ಹತ್ಯೆಗಳು: ಪ್ರಶಾಂತ, ಶರತ್‌, ದೀಪಕ್‌, ಪ್ರವೀಣ್‌?

02:12 AM Jul 28, 2022 | Team Udayavani |

ಸುಳ್ಯ: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರನ್ನು ದುಷ್ಕರ್ಮಿಗಳು ಕೊಲೆಗೈದ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣಗಳಿವೆ.

Advertisement

ಬುಧವಾರ ಆ ಆಕ್ರೋಶದ ವಿಶ್ವರೂಪ ದರ್ಶನವಾದದ್ದು ಜನಪ್ರತಿನಿಧಿಗಳಿಗೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಸುನಿಲ್‌ ಕುಮಾರ್‌, ಅಂಗಾರ ಹಾಗೂ ಶಾಸಕ ಸಂಜೀವ್‌ ಮಠಂದೂರು ಅವರಿಗೆ. “ಅಂದು ಪ್ರಶಾಂತ, ಶರತ್‌, ದೀಪಕ್‌..ಇಂದು ಪ್ರವೀಣ. ಇದಕ್ಕೆ ಕೊನೆಯೇ ಇಲ್ಲವೇ?’ ಎಂದು ಆಕ್ರೋಶದಿಂದ ಜನಪ್ರತಿನಿಧಿಗಳಿಗೆ ದಿಗ್ಬಂಧನ ವಿಧಿಸಿ ಪ್ರಶ್ನಿಸಿದರು. ಇದಕ್ಕೆ ಎಲ್ಲರೂ ಉತ್ತರ ನೀಡದೇ ಮೌನಕ್ಕೆ ಶರಣಾದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ್ಗೆ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ನಡೆದರೂ ಸರಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಒತ್ತಡ ಹೇರುತ್ತಿಲ್ಲ ಎಂಬುದು ಹಿಂದೂ ಸಮುದಾಯದ ಆಕ್ರೋಶಕ್ಕೆ ಮೂಲ ಕಾರಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಮುಖ ಹತ್ಯೆಗಳು.

ಪ್ರಶಾಂತ್‌ ಪೂಜಾರಿ
9-10-2015 ರಂದು ಬೆಳಗ್ಗೆ 7ರ ವೇಳೆಗೆ ಮೂಡುಬಿದಿರೆಯಲ್ಲಿ ಬಜರಂಗದಳ ಮುಖಂಡ ಪ್ರಶಾಂತ ಪೂಜಾರಿ ಅವರ ಹತ್ಯೆ. ಮೂಡು ಬಿದಿರೆ ಬಸ್‌ ನಿಲ್ದಾಣ ಬಳಿ ಹೂವಿನ ವ್ಯಾಪಾರ ಮಾಡುವ ವೇಳೆ ದುಷ್ಕರ್ಮಿಗ ‌ಳು ಮುಂಜಾನೆ ತಲ ವಾರು ದಾಳಿ ನಡೆಸಿ ಹತ್ಯೆ ನಡೆಸಿದ್ದರು.

ಶರತ್‌ ಮಡಿವಾಳ
ಬೆಂಜನಪದವಿನ ಅಶ್ರಫ್‌ ಕಲಾಯಿ ಎಂಬ ಎಸ್‌ಡಿಪಿಐ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಎಂಬಂತೆ 2017ರ ಜುಲೈನಲ್ಲಿ ಬಿ.ಸಿ.ರೋಡಿನಲ್ಲಿ ಕೆಲವು ದುಷ್ಕರ್ಮಿಗಳು ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಾಲ್ಕು ದಿನ ಬಳಿಕ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Advertisement

ದೀಪಕ್‌ ರಾವ್‌
2018ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಸುರತ್ಕಲ್‌ನ ಕಾಟಿಪಳ್ಳದಲ್ಲಿ ಕೆಲವು ದುಷ್ಕರ್ಮಿಗಳು ತಲವಾರುಗಳಿಂದ ಹತ್ಯೆ ನಡೆಸಿದ್ದರು. ಈ ಮೂರೂ ಪ್ರಕರಣ ಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಜೈಲಿನಲ್ಲಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next