Advertisement
ಬುಧವಾರ ಆ ಆಕ್ರೋಶದ ವಿಶ್ವರೂಪ ದರ್ಶನವಾದದ್ದು ಜನಪ್ರತಿನಿಧಿಗಳಿಗೆ. ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಸುನಿಲ್ ಕುಮಾರ್, ಅಂಗಾರ ಹಾಗೂ ಶಾಸಕ ಸಂಜೀವ್ ಮಠಂದೂರು ಅವರಿಗೆ. “ಅಂದು ಪ್ರಶಾಂತ, ಶರತ್, ದೀಪಕ್..ಇಂದು ಪ್ರವೀಣ. ಇದಕ್ಕೆ ಕೊನೆಯೇ ಇಲ್ಲವೇ?’ ಎಂದು ಆಕ್ರೋಶದಿಂದ ಜನಪ್ರತಿನಿಧಿಗಳಿಗೆ ದಿಗ್ಬಂಧನ ವಿಧಿಸಿ ಪ್ರಶ್ನಿಸಿದರು. ಇದಕ್ಕೆ ಎಲ್ಲರೂ ಉತ್ತರ ನೀಡದೇ ಮೌನಕ್ಕೆ ಶರಣಾದರು.
9-10-2015 ರಂದು ಬೆಳಗ್ಗೆ 7ರ ವೇಳೆಗೆ ಮೂಡುಬಿದಿರೆಯಲ್ಲಿ ಬಜರಂಗದಳ ಮುಖಂಡ ಪ್ರಶಾಂತ ಪೂಜಾರಿ ಅವರ ಹತ್ಯೆ. ಮೂಡು ಬಿದಿರೆ ಬಸ್ ನಿಲ್ದಾಣ ಬಳಿ ಹೂವಿನ ವ್ಯಾಪಾರ ಮಾಡುವ ವೇಳೆ ದುಷ್ಕರ್ಮಿಗ ಳು ಮುಂಜಾನೆ ತಲ ವಾರು ದಾಳಿ ನಡೆಸಿ ಹತ್ಯೆ ನಡೆಸಿದ್ದರು.
Related Articles
ಬೆಂಜನಪದವಿನ ಅಶ್ರಫ್ ಕಲಾಯಿ ಎಂಬ ಎಸ್‌ಡಿಪಿಐ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಎಂಬಂತೆ 2017ರ ಜುಲೈನಲ್ಲಿ ಬಿ.ಸಿ.ರೋಡಿನಲ್ಲಿ ಕೆಲವು ದುಷ್ಕರ್ಮಿಗಳು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಾಲ್ಕು ದಿನ ಬಳಿಕ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
Advertisement
ದೀಪಕ್ ರಾವ್2018ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ಸುರತ್ಕಲ್‌ನ ಕಾಟಿಪಳ್ಳದಲ್ಲಿ ಕೆಲವು ದುಷ್ಕರ್ಮಿಗಳು ತಲವಾರುಗಳಿಂದ ಹತ್ಯೆ ನಡೆಸಿದ್ದರು. ಈ ಮೂರೂ ಪ್ರಕರಣ ಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಜೈಲಿನಲ್ಲಿದ್ದಾರೆ.