Advertisement

ಕೆಳಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಂಟೈನರ್‌ ಲಾರಿ

01:39 AM Jul 04, 2022 | Team Udayavani |

ಮಣಿಪಾಲ: ಕೆಳಪರ್ಕಳದಲ್ಲಿ ಶನಿವಾರ ರಾತ್ರಿ ಕಂಟೈನರ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

Advertisement

ಪರ್ಕಳದಿಂದ ಗೋವಾ ಕಡೆಗೆ ರದ್ದಿ ಪೇಪರ್‌ ತುಂಬಿ ಕೊಂಡು ಹೊರಟ ಲಾರಿಯು ಕಾಂಕ್ರೀಟ್‌ ರಸ್ತೆ ಮುಗಿದ ಬಳಿಕ ಇಳಿಜಾರು ಪ್ರದೇಶದಲ್ಲಿ ಇರುವ ಡಾಮರು ರಸ್ತೆಗೆ ತಿರುಗುವಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ಶೆಣೈ ಕಾಂಪೌಂಡ್‌ನ‌ ಮನೆಯ ಮೇಲೆ ಮಗುಚಿ ಬಿದ್ದಿದೆ. ಮನೆಯಲ್ಲಿ ಯಾರು ವಾಸ ಮಾಡದೇ ಇರುವ ಕಾರಣ ಸಂಭವನೀಯ ದೊಡ್ಡ ಅಪಾಯವೊಂದು ತಪ್ಪಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅಪೂರ್ಣ ಕಾಮಗಾರಿ ಕಾರಣ
ಪರ್ಕಳ ದೇವಿನಗರದಿಂದ ಕೆಳಪರ್ಕಳ ತನಕ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆದಿದ್ದು ಅಲ್ಲಿಂದ ಈಶ್ವರನಗರ ತನಕ ಹಳೆಯ ರಸ್ತೆಯಲ್ಲೇ ವಾಹನಗಳು ಸಾಗಬೇಕಿದೆ. ಹೊಸ ಕಾಂಕ್ರೀಟ್‌ ರಸ್ತೆಯನ್ನು ಬಹಳಷ್ಟು ಎತ್ತರಿಸಿರುವು ದರಿಂದ ಹಳೆಯ ಡಾಮರು ರಸ್ತೆ ತಗ್ಗಿನಲ್ಲಿದೆ. ಪರ್ಕಳ ಕಡೆಯಿಂದ ಹೊಸರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ತಗ್ಗಿನಲ್ಲಿರುವ ಡಾಮರು ರಸ್ತೆಗೆ ತಿರುವು ಪಡೆದು ಕೊಳ್ಳಬೇಕು.

ಅಲ್ಲದೆ ಅಲ್ಲಿ ಡಾಮರು ರಸ್ತೆಯ ಅರ್ಧ ಭಾಗ ಕುಸಿದು ಹೋಗಿರುವ ಕಾರಣ ಆಗಾಗ ಅಲ್ಲಿ ಅವಘಡಗಳು ಸಂಭವಿಸುತ್ತಿರುತ್ತವೆ. ಶನಿವಾರ ಬೆಳಗ್ಗೆ 8ರವೇಳೆ ಬೃಹತ್‌ ಕಂಟೈನರ್‌ ಒಂದು ಇದೇ ಜಾಗದಲ್ಲಿ ಮೇಲಕ್ಕೆ ಬರಲಾಗದೆ ನಿಂತ ಕಾರಣ ಸುಮಾರು ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ವಿದ್ಯಾರ್ಥಿಗಳು, ನೌಕರರು ಸಕಾಲದಲ್ಲಿ ಗಮ್ಯ ಸೇರಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದರು. ಮನೆಯ ಮೇಲೆ ಮರಳು ತುಂಬಿದ ಲಾರಿ ಉರುಳಿದ್ದು ಸೇರಿದಂತೆ ಕಳೆದ 2 ತಿಂಗಳ ಅವಧಿಯಲ್ಲಿ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next