Advertisement

ನಗ್ನ ಜಾಲದಲ್ಲಿ ತೊಳಲಾಡುತ್ತಿರುವ ಬೀದರ್‌ನ 15 ಮಂದಿ ಪುರುಷರು!

12:05 AM Jun 27, 2022 | Team Udayavani |

ಬೀದರ್‌: ವೀಡಿಯೋ ಕಾಲ್‌ನಲ್ಲಿ ಸಂಪರ್ಕ ಸಾಧಿಸಿರುವ ಯುವತಿಯರ ಮಾತಿಗೆ ಮರುಳಾಗಿ ನಗ್ನ ದೇಹ ಪ್ರದರ್ಶಿಸಿ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ 15ಕ್ಕೂ ಹೆಚ್ಚು ಮಂದಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಪಶ್ಚಿಮ ಬಂಗಾಲ, ರಾಜಸ್ಥಾನ ಮತ್ತು ಝಾರ್ಖಂಡ್‌ ಸಹಿತ ಉತ್ತರ ಭಾರತದಲ್ಲಿ ಇಂಥ ಸೈಬರ್‌ ಜಾಲಗಳು ವ್ಯಾಪಕವಾಗಿ ಹರಡಿಕೊಂಡಿದ್ದು, ಮುಖ್ಯವಾಗಿ ರಾಜಕಾರಣಿ, ಉದ್ಯಮಿ ಹಾಗೂ ಇತರ ಪ್ರಭಾವಿಗಳಿಗೇ ಗಾಳ ಹಾಕಲಾಗುತ್ತಿದೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ನಕಲಿ ಅಕೌಂಟ್‌ಗಳ ಮೂಲಕ ಯುವಕರನ್ನು ಪರಿಚ ಯಿಸಿಕೊಂಡು ಸಲುಗೆ ಬೆಳೆಸಿ, ಬಳಿಕ ವೀಡಿಯೋ ಕಾಲ್‌ ಮಾಡುತ್ತಾರೆ. ಬಳಿಕ ಖಾಸಗಿಯಾಗಿ ಮಾತನಾಡುವ ಯುವತಿಯರು ನಗ್ನ ದೇಹ ಪ್ರದರ್ಶಿಸು ತ್ತಾರೆ.

ಅಲ್ಲದೆ ಪುರುಷರನ್ನೂ ನಗ್ನರಾಗಲು ಪ್ರೇರೇಪಿಸುತ್ತಾರೆ. ಇದಕ್ಕೆ ಸ್ಪಂದಿಸು ವವರ ವೀಡಿಯೋ ಚಿತ್ರೀಕರಿಸಿಕೊಂಡು ಹಣಕ್ಕೆ ಬೇಡಿಕೆ ಇರಿಸುತ್ತಾರೆ. ಹಣ ನೀಡಲು ಒಪ್ಪದಿದ್ದರೆ ವೀಡಿಯೋ ವೈರಲ್‌ ಮಾಡುವ ಬೆದರಿಕೆ ಒಡ್ಡುತ್ತಾರೆ. ದೂರು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ.

ಬೇರೆ ಸಂತ್ರಸ್ತರಿದ್ದರೆ ದೂರು ನೀಡುವಂತೆ ಪೊಲೀಸ್‌ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next