ಉಡುಪಿ: ಅಪಘಾತ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆಯಾಗಿದೆ.
2014ರಲ್ಲಿ ಲಾರಿ ಚಾಲಕ ಕುಂದಾಪುರದ ಖಾಲಿದ್ (65) ಲಾರಿಯನ್ನು ಕೋಡಿಬೇಂಗ್ರೆ ಕಡೆಯಿಂದ ಹೂಡೆ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಪಡುತೋನ್ಸೆ ಗ್ರಾಮದ ಹೂಡೆ-ಕೋಡಿಬೇಂಗ್ರೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಜಯಂತ್ ಕುಂದರ್, ಅವರ ಪತ್ನಿ ಭಾರತಿ ಹಾಗೂ ಗ್ರೀಷ್ಮಾ ಅವರಿಗೆ ಢಿಕ್ಕಿ ಹೊಡೆದಿದ್ದ.
ಈ ವೇಳೆ ಭಾರತಿ ಅವರ ಮೇಲೆ ಲಾರಿ ಹರಿದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಜಯಕುಂದರ್ ಮತ್ತು ಅವರ ಮಗಳು ಗ್ರೀಷ್ಮಾ ಅವರಿಗೆ ಸಾಮಾನ್ಯ ಗಾಯವಾಗಿತ್ತು.
ಇದರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿಗೆ ಖಾಲಿದ್‌ಗೆ 2 ವರ್ಷ ಮತ್ತು 6 ತಿಂಗಳು ಕಾರಾಗೃಹ ವಾಸದ ಶಿಕ್ಷೆ ಮತ್ತು 9,500 ರೂ.ದಂಡವನ್ನು ವಿಧಿಸಿ ಜೂ. 24ರಂದು ಆದೇಶಿಸಿದ್ದಾರೆ.
Related Articles
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ಅವರು ವಾದ ಮಂಡಿಸಿದ್ದರು.