Advertisement

ಬೆಳ್ಳಾರೆ: ರಿಪೇರಿಗೆ ಬಂದಿದ್ದ ಮೊಬೈಲ್‌ ಸ್ಫೋಟ

12:26 AM Jun 22, 2022 | Team Udayavani |

ಸುಳ್ಯ: ಮೊಬೈಲ್‌ ಅಂಗಡಿಗೆ ರಿಪೇರಿಗೆ ಬಂದಿದ್ದ ಮೊಬೈಲ್‌ ಸ್ಫೋಟಗೊಂಡಿರುವ ಘಟನೆ ಜೂ. 20ರಂದು ಬೆಳ್ಳಾರೆಯ ಮೊಬೈಲ್‌ ಅಂಗಡಿಯೊಂದರಲ್ಲಿ ನಡೆದಿದೆ.

Advertisement

ಬೆಳ್ಳಾರೆಯ ಕೆಳಗಿನಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್‌ ಶೋರೂಂನಲ್ಲಿ ರಿಪೇರಿಗೆಂದು ಬಂದಿದ್ದ ರೆಡ್ಮಿ ಆ್ಯಂಡ್ರಾಯ್ಡ ಮೊಬೈಲ್‌ ಫೋನ್‌ ಆಕಸ್ಮಿಕವಾಗಿ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯ ದೃಶ್ಯಾವಳಿ ಸಂಸ್ಥೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಗ್ರಾಹಕಿಯೋರ್ವರು ತಂದಿದ್ದ ಮೊಬೈಲ್‌ ಇದಾಗಿದ್ದು ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆ ನೀಡಿದ್ದರು.

ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.

ಎರಡನೇ ಘಟನೆ
ಇತ್ತೀಚೆಗೆ ಬೆಳ್ಳಾರೆಯಲ್ಲಿ ಹೊಟೇಲ್‌ಗೆ ಬಂದಿದ್ದ ಯುವತಿಯ ಮೊಬೈಲ್‌ ಸ್ಫೋಟಗೊಂಡ ಘಟನೆ ನಡೆದಿತ್ತು. ಇದೀಗ ಬೆಳ್ಳಾರೆಯಲ್ಲಿ ಎರಡನೇ ಬಾರಿಗೆ ಮೊಬೈಲ್‌ ಸ್ಫೋಟಗೊಂಡ ಘಟನೆ ನಡೆದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next