ಬೆಳ್ಮಣ್: ಮುಂಡ್ಕೂರು ಸಂಕಲಕರಿಯದಲ್ಲಿ ರವಿವಾರ ಸಂಜೆ ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ತೆರಳುತ್ತಿದ್ದ ಜೀಪು ಪಲ್ಟಿಯಾಗಿ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಪಾವನಿ (18) ಎಂದು ಗುರುತಿಸಲಾಗಿದೆ.
ಜೀಪು ಚಾಲಕನ ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಕುಳಾಯಿಯಿಂದ ಖಾಸಗಿ ಕಾರ್ಯಕ್ರಮ ಮುಗಿಸಿ ಹಿಂದೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಅತ್ರಾಡಿ -ಬಜಪೆ ರಸ್ತೆಯ ಭಾಗವಾಗಿರುವ ಬೆಳ್ಮಣ್ – ಸಂಕಲಕರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ತಿರುವಿನ ಬಗ್ಗೆ ತಿಳಿಯದೆ ಈ ಅಪಘಾತ ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿದ್ದಾರೆ.