Advertisement

4.20 ಲ.ರೂ. ಮೌಲ್ಯದ ಎಂಡಿಎಂಎ ಸಹಿತ ಓರ್ವನ ಬಂಧನ

01:18 AM Jun 13, 2022 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಮಾರಲು ಯತ್ನಿಸುತ್ತಿದ್ದ ಓರ್ವನನ್ನು ನಗರದ ಉತ್ತರ ಠಾಣಾ ಪೊಲೀಸರು ಬಂಧಿಸಿದ್ದು ಆರೋಪಿಯಿಂದ 4.20 ಲ.ರೂ. ಮೌಲ್ಯದ ಎಂಡಿಎಂಎ ವಶಪಡಿಸಿ ಕೊಂಡಿದ್ದಾರೆ.

Advertisement

ಬಜ್ಪೆಯ ಮೊಹಮ್ಮದ್‌ ಬಶೀರ್‌ ಶಿಯಾಬ್‌ (34) ಬಂಧಿತ ಆರೋಪಿ. ಮಂಗಳೂರು ಉತ್ತರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಗರಾಜ ಎಸ್‌. ಅವರ ನೇತೃತ್ವದ ತಂಡ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ಮೈದಾನ 3ನೇ ಕ್ರಾಸ್‌ ರಸ್ತೆಯಲ್ಲಿ ಲಾಡ್ಜ್ ವೊಂದರ ಮುಂಭಾಗ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಎಂಡಿಎಂಎ ಮಾರಾಟ ಮಾಡಲು ನಿಂತುಕೊಂಡಿದ್ದ ಆರೋಪಿಯನ್ನು ಬಂಧಿಸಿದೆ.

ಆರೋಪಿಯಿಂದ 4.20 ಲ. ರೂ. ಮೌಲ್ಯದ ಒಟ್ಟು 105. 48 ಗ್ರಾಂ ಎಂಡಿಎಂಎ, 500 ರೂ. ಮೌಲ್ಯದ ತೂಕಮಾಪನ, 2,000 ರೂ. ಮೌಲ್ಯದ ಸ್ಟೀಲ್‌ ಚಾಕು, 10,600 ರೂ. ಮೌಲ್ಯದ 2 ಮೊಬೈಲ್‌ ಫೋನ್‌, ಸ್ಕೂಟರ್‌ ಸ್ವಾಧೀನಪಡಿಸಿಕೊಂಡಿದ್ದಾರೆ.

ಗಾಂಜಾ ಸೇವನೆ: ಯುವಕ ಪೊಲೀಸರ ವಶಕ್ಕೆ
ಮಂಗಳೂರು: ನಗರದ ಕೊಟ್ಟಾರ ಚೌಕಿ ಕ್ರಾಸ್‌ ಬಳಿ ರವಿವಾರ ಬೆಳಗ್ಗೆ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರದೀಪ್‌(24)ನನ್ನು ನಗರದ ಸೆನ್‌ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಬೈಲ್‌ ಅಂಗಡಿ ಮಾಲಕ ಆತ್ಮಹತ್ಯೆ
ಮಂಗಳೂರು: ನಗರದ ಕೂಳೂರು ಸಮೀಪ ಮೊಬೈಲ್‌ ಅಂಗಡಿ ಹೊಂದಿರುವ ಸುರತ್ಕಲ್‌ ಚೊಕ್ಕಬೆಟ್ಟಿನ ಸೊಹೈಲ್‌ (34) ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್‌ ಅಂಗಡಿಯ ಹಿಂಬದಿಯ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next