ಪುತ್ತೂರು: ಭಿನ್ನ ಧರ್ಮೀಯ ಯುವಕ ಹಾಗೂ ಯುವತಿ ಪುತ್ತೂರಿನ ರೈಲ್ವೇ ನಿಲ್ದಾಣದಲ್ಲಿ ಇರುವ ಕುರಿತು ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಚಾ ರಿಸಿದ ಘಟನೆ ಜೂ. 10ರಂದು ರಾತ್ರಿ ನಡೆದಿದೆ.
ಬನ್ನೂರು ಮೂಲದ ಮುಸ್ಲಿಂ ಯುವಕ ಹಾಗೂ ಬೆಂಗಳೂರು ಮೂಲದ ಯುವತಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ 10 ಗಂಟೆಗೆ ಜತೆಯಾಗಿ ನಿಂತಿದ್ದರು. ಯುವಕನ ಸಂಬಂಧಿಯೊಬ್ಬರ ಮದುವೆಗೆ ಆ ಯುವತಿ ಬೆಂಗಳೂರಿನಿಂದ ಒಂದು ದಿನದ ಹಿಂದೆ ಆಗಮಿಸಿದ್ದರು.
ಯುವಕನ ಮನೆ ಯಲ್ಲಿ ತಂಗಿದ್ದರು. ಮದುವೆ ಮುಗಿಸಿ ವಾಪಸು ಬೆಂಗಳೂರಿಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಸಂಘಟನೆಯ ಕಾರ್ಯಕರ್ತರು ವಿಚಾರಿಸಿದ್ದಾರೆ. ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಿದ್ದಾರೆ.
ಯುವಕ ತನ್ನ ಸ್ನೇಹಿತನಾಗಿದ್ದು ಸ್ವಇಚ್ಛೆಯಿಂದ ಬಂದಿರುವು ದಾಗಿ ಯುವತಿ ಪೊಲೀಸರ ಮುಂದೆ ಹೇಳಿರುವು ದಾಗಿಯೂ, ಬಳಿಕ ಪೊಲೀಸರು ಅವರಿಗೆ ತೆರಳಲು ಅವಕಾಶ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.