Advertisement

ಮಂಗಳೂರು: ಮಹಿಳೆಯ ಮನೆಗೆ ನುಗ್ಗಿ ತಂಡದಿಂದ ಹಲ್ಲೆ

02:17 AM Jun 11, 2022 | Team Udayavani |

ಮಂಗಳೂರು: ಬೊಂಡಂತಿಲ ಗ್ರಾಮದ ಬಿತ್ತ್ಪಾದೆ ಮಸೀದಿ ಬಳಿಯ ನಿವಾಸಿ ಮಹಿಳೆಯ ಮನೆಗೆ ಗುರುವಾರ ರಾತ್ರಿ ತಂಡವೊಂದು ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದೆ.

Advertisement

ಅಡ್ಯಾರ್‌ ಕಣ್ಣೂರು ನಿವಾಸಿಗಳಾದ ಮೊಹಮ್ಮದ್‌ ಸಿನಾನ್‌, ಮೊಹಮ್ಮದ್‌ ಸಿಯಾನ್‌, ಮೊಹಮ್ಮದ್‌ ರಫೀಜ್‌ ಪ್ರಕರಣದ ಆರೋಪಿಗಳು.

ಮಕ್ಕಳು ಅಂಗಳದಲ್ಲಿ ಸೈಕಲ್‌ನಲ್ಲಿ ಆಟವಾಡುವ ವಿಚಾರದಲ್ಲಿ ಸಾಹಿದಾ, ಅವರ ಗಂಡ ನವಾಜ್‌ ಮತ್ತು ನೆರೆಮನೆಯ ನಫಿಯಾ ಅವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಚಾರದಲ್ಲಿ ಜೂ. 9ರಂದು ರಾತ್ರಿ 8.30ರ ವೇಳೆಗೆ ಸಾಹಿದಾ ಅವರು ವಾಸವಿದ್ದ ಮನೆಗೆ ನಫಿಯಾ ಸಂಬಂಧಿಗಳಾದ ಅಡ್ಯಾರ್‌ ಕಣ್ಣೂರು ನಿವಾಸಿಗಳಾದ ಮೊಹಮ್ಮದ್‌ ಸಿನಾನ್‌, ಮೊಹಮ್ಮದ್‌ ಸಿಯಾನ್‌, ಮೊಹಮ್ಮದ್‌ ರಫೀಜ್‌ ಅಕ್ರಮವಾಗಿ ಪ್ರವೇಶಿಸಿ ಸಾಹಿದಾ ಅವರ ಗಂಡ ನವಾಜ್‌ಗೆ ಹಲ್ಲೆಗೈದಿದ್ದಾರೆ.

ಸಾಹಿದಾ ಮಾನಹಾನಿಯಾಗುವ ರೀತಿಯಲ್ಲಿ ಎಳೆದಾಡಿದ್ದರು. ಈ ಸಂದರ್ಭ ಸಾಹಿದಾ ಗಂಡನ ಅಕ್ಕ ಜುಬೇದಾರವರು ಆಕ್ಷೇಪ ವ್ಯಕ್ತಪಡಿಸಿ ಅಲ್ಲಿಗೆ ಬಂದಿದ್ದು, ಅವರನ್ನೂ ಎಳೆದಾಡಿ ಹೊಡೆದಿರುವುದಾಗಿ ದೂರು ನೀಡಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ.

ವಿಟ್ಲದಲ್ಲಿ ಲಾರಿ ಮೈಮೇಲೆ ಹರಿದು
ಪಾದಚಾರಿ ಸಾವು
ವಿಟ್ಲ: ವಿಟ್ಲ ಅರಮನೆ ರಸ್ತೆಯಲ್ಲಿ ಪಾನಮತ್ತ ವ್ಯಕ್ತಿಯೊಬ್ಬರ ಮೇಲೆ ಲಾರಿ ಹರಿದು ಗಂಭೀರ ಗಾಯಗೊಂಡ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಟ್ಲಪಟ್ನೂರು ಗ್ರಾಮದ ಎತ್ತುಕಲ್ಲು ನಿವಾಸಿ ನಾರಾಯಣ ನಾಯ್ಕ (32) ಮೃತರು.

Advertisement

ಕಾಸರಗೋಡು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಲಾರಿಯ ಅಡಿಗೆ ಈತ ಏಕಾಏಕಿ ಬಿದ್ದಿದ್ದು, ತಲೆಯ ಹಾಗೂ ಎದೆಯ ಭಾಗಗಳಿಗೆ ಗಂಭಿರ ಗಾಯವಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಲಾಂ ನಿಂದನೆ ಆರೋಪ: ಕೇಸು
ವಿಟ್ಲ: ವಿಶ್ವಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗ ದಳವು ಇತ್ತೀಚೆಗೆ ವಿಟ್ಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಮ್‌ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಸಂಘ ಪರಿವಾರದ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ. 6ರಂದು ವಿಟ್ಲದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಭಾಷಣ ಮಾಡಿರುವ ಬಗ್ಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next