Advertisement

ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ; ಪೊಲೀಸರಿಂದ ನಿರಾಕರಣೆ

12:40 AM Jun 04, 2022 | Team Udayavani |

ಪುತ್ತೂರು: ಕಬಕದ ಕೊಡಿಪ್ಪಾಡಿಯಲ್ಲಿ ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಹಿಂದೂ ಯುವಕನೊಬ್ಬನಿದ್ದು ಎರಡೂ ಕೋಮಿನ ಜನ ಸೇರಿದ್ದಾರೆ ಎಂಬ ಸುದ್ದಿ ಗುರುವಾರ ಎಲ್ಲೆಡೆ ಹಬ್ಬಿತ್ತು. ಆದರೆ ಪೊಲೀಸ್‌ ಇಲಾಖೆ ಇಂತಹ ಘಟನೆ ನಡೆದಿಲ್ಲ ಎಂದು ಘಟನೆಯನ್ನು ನಿರಾಕರಿಸಿದೆ.

Advertisement

ಕಬಕ ಸಮೀಪದ ಮನೆಯೊಂದರ ಮುಂಬಾಗಿಲಿಗೆ ಬೀಗ ಹಾಕಲಾಗಿತ್ತು. ಮನೆಯೊಳಗೆ ಆಟೋ ಚಾಲಕ, ಯುವಕನೋರ್ವ ಇದ್ದಾನೆ ಎಂಬ ಸುದ್ದಿ ಹಬ್ಬಿತು. ಮನೆಯ ಸುತ್ತ ನೂರಾರು ಮಂದಿ ಜಮಾಯಿಸುತ್ತಿದ್ದಂತೆಯೇ ನಗರ ಪೊಲೀಸರಿಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಿದ್ದಾರೆ ಎನ್ನುವ ಬಗ್ಗೆ ಸ್ಥಳೀಯ ಕೆಲವರು ಮಾಹಿತಿ ನೀಡಿದ್ದರು.

ಪೊಲೀಸರು ಮನೆಯ ಸುತ್ತ ಪರಿಶೀಲನೆ ನಡೆಸುವ ವೇಳೆ ಹಿಂಬಾಗಿಲಿನ ಚಿಲಕ ತೆಗೆದಿದ್ದು ಬಾಗಿಲು ತೆರೆಯಲಾಗಿತ್ತು. ಜನ ಸೇರುವುದನ್ನು ಕಂಡ ಅವರಿಬ್ಬರು ಹಿಂಬಾಗಿಲಿನ ಮೂಲಕ ಓಡಿ ತಪ್ಪಿಸಿಕೊಂಡಿದ್ದು, ಯಾರಿಗೂ ಗೊತ್ತಾಗಿರಲಿಲ್ಲ ಎಂಬ ಬಗ್ಗೆಯೂ ವಿಷಯ ಎಲ್ಲೆಡೆ ಹಬ್ಬಿತ್ತು. ಆದರೆ ನಗರ ಠಾಣೆಯನ್ನು ಸಂಪರ್ಕಿಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದು ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next